Skip to main content

Posts

Showing posts from November 28, 2010

ಸರ್ವಜ್ಞನ ವಚನಗಳು - 81 ರಿಂದ 90

ಸರ್ವಜ್ಞನ ವಚನಗಳು -  81 ರಿಂದ 90 ೮೧. ಎಲ್ಲ ದೈವವ ಬೇಡಿ ಹುಲ್ಲು ಬಾಯ್ತೆರೆಯದೆಲೆ ಬಲ್ಲ ದಾಶಿವನ ಭಜಿಸಿ ಬೇಡಿದಾತ ಇಲ್ಲೆನಲಿಕರಿಯ ಸರ್ವಜ್ಞ ೮೨. ಆದಿ ದೈವವನು ತಾ ಭೇದಿಸಲಿ ಕರಿಯದಲೆ ಹಾದಿಯಾಕಲ್ಲಿಗೆಡೆಮಾಡಿ ನಮಿಸುವಾ ಮಾದಿಗರ ನೋಡು ಸರ್ವಜ್ಞ ೮೩. ತನ್ನಲಿಹ ಲಿಂಗವನು ಮನ್ನಿ ಸಲಿಕರಿಯದಲೆ ಬಿನ್ನಣದಿ ಕಟಿದ ಪ್ರತಿಮೆಗಳಿಗೆರಗುವಾ ಅನ್ಯಾಯ ನೋಡು ಸರ್ವಜ್ಞ ೮೪. ಉಣಬಂದ ಜಂಗಮಕೆ ಉಣಬಡಿಸಲೊಲ್ಲದಲೆ ಉಣದಿಪ್ಪ ಲಿಂಗಕುಣಬಡಿಸಿ ಕೈಮುಗಿವ ಬಣಗುಗಳ ನೋಡ ಸರ್ವಜ್ಞ ೮೫. ಕಲ್ಲು ಕಲ್ಲೆಂಬುವಿರಿ ಕಲ್ಲೊಳಗಿರ್ಪುದೇ ದೈವ ಕಲ್ಲಲ್ಲಿ ಕಳೆಯನಿಲಿಸಿದಾ ಗುರುವಿನಾ ಸೊಲ್ಲೇದೈವ ಸರ್ವಜ್ಞ ೮೬. ಗುಡಿಯ ಬೋದಿಗೆ ಕಲ್ಲು ನಡುರಂಗ ತಾ ಕಲ್ಲು ಕಡೆಮೂಲೆ ಸೆರಗು ತಾ ಕಲ್ಲು ವರವನ್ನು ಕೊಡುವಾತ ಬೇರೆ ಸರ್ವಜ್ಞ ೮೭. ಪ್ರಾಣನೂ ಪರಮಮನು ಕಾಣದಲೆ ಒಳಗಿರಲು ಮಾಣದೇ ಸಿಲೆಯ ಹಿಡಿದದಕೆ ಮೂರ್ಖ ತಾ ಪ್ರಾಣಾತ್ಮನೆಂಬ ಸರ್ವಜ್ಞ ೮೮. ಕಲ್ಲು ಗುಂಡಿನ ಮೇಲೆ ಮಲ್ಲಿಗೆಯ ಅರಳಿಕ್ಕಿ ನಿಲ್ಲದಲೆ ಹಣೆಯ ಬಡಿವರ್ಗೆ ಬುಗುಟಿಲ್ಲ ದಿಲ್ಲ ಕಾಣಯ್ಯ ಸರ್ವಜ್ಞ ೮೯. ಉತ್ಪತ್ತಿಗೆ ಬೊಮ್ಮಗಡ ಸ್ಥಿತಿಗೆ ವಿಷ್ಣುಗಡ ಹತವ ಗೈವುದಕ್ಕೆ ರುದ್ರಗಣ, ಇವರುಗಳ ಸ್ಥಿತಿಯನರಿಯೆಂದ ಸರ್ವಜ್ಞ ೯೦. ಬೊಮ್ಮನಿರ್ಮಿಪನೆಂಬ ಮರ್ಮತಿಯ ನೀ ಕೇಳು ಬೊಮ್ಮನಾ ಸತಿಗೆ ಮೂಗಿಲ್ಲವಾಮೂಗ ನಿರ್ಮಿಸನದೇಕೆ ಸರ್ವಜ್ಞ