Skip to main content

Posts

Showing posts from February 1, 2011

ಬಸವಣ್ಣನ ವಚನಗಳು - 351 ರಿಂದ 360 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೩೫೧. ತೊರೆಯ ಮೀವ ಅಣ್ಣಗಳಿರಾ, ತೊರೆಯ ಮೀವ ಸ್ವಾಮಿಗಳಿರಾ, ತೊರೆಯಿಂ ಭೋ, ತೊರೆಯಿಂ ಭೋ! ಪರನಾರಿಯ ಸಂಗವ ತೊರೆಯಿಂ ಭೋ! ಪರಧನದಾಮಿಷವ ತೊರೆಯಿಂ ಭೋ! ಇವ ತೊರೆಯದೇ, ಹೋಗಿ ತೊರೆಯ ಮಿಂದರೆ ಬರುದೊರೆ ಹೋಹುದು ಕೂಡಲಸಂಗಮದೇವ. ೩೫೨. ಹುತ್ತವ ಕಂಡಲ್ಲಿ ಹಾವಾಗಿ, ನೀರ ಕಂಡಲ್ಲಿ ಹೊಳೆಯಾದವನ ಮೆಚ್ಚುವನೆ ? ಬಾರದ ಭವಕ್ಕೆ ಬರಿಸುವನಲ್ಲದೆ ಮೆಚ್ಚುವನೆ ? ಅಘೋರ ನರಕವನುಣಿಸುವನಲ್ಲದೆ ಮೆಚ್ಚುವನೆ ? ಅಟಮಟದ ಭಕ್ತರ ಕಂಡರೆ ಕೋಟಲೆಗೊಳಿಸುವನು ಕೂಡಲಸಂಗಯ್ಯನು. ೩೫೩. ಕುಳ್ಳಿದ್ದು ಲಿಂಗವ ಪೂಜಿಸಿ ಅಲ್ಲದಾಟವನಾಡುವರಯ್ಯ; ಬೆಳ್ಳೆತ್ತಿನ ಮರೆಯಲ್ಲಿದ್ದು ಹುಲ್ಲೆಗೆ ಅಂಬ ತೊಡುವಂತೆ! ಕಳ್ಳ-ಹಾದರಿಗರ ಕೈಯಲು ಪೂಜೆಯ ಕೊಳ್ಳ ನಮ್ಮ ಕೂಡಲಸಂಗಮದೇವ. ೩೫೪. ತನುಶುಚಿಯಿಲ್ಲದವನ ದೇಹಾರವೇಕೆ ? ದೇವರು ಕೊಡನೆಂಬ ಭ್ರಾಂತೇಕೆ ? ಮನಕ್ಕೆ ಮನವೇ ಸಾಕ್ಷಿ ಸಾಲದೆ ಲಿಂಗ ತಂದೆ ?! ಹೇಂಗೆ ಮನ ಹಾಂಗೆ ಘನ! ತಪ್ಪದು ಕೂಡಲಸಂಗಮದೇವ. ೩೫೫. ನೂರನೋದಿ ನೂರ ಕೇಳಿದರೇನು ? ಆಶೆ ಹರಿಯದು, ರೋಷ ಬಿಡದು! ಮಜ್ಜನಕ್ಕೆರೆದು ಫಲವೇನು ? ಮಾತಿನಂತೆ ಮನವಿಲ್ಲದ ಜಾತಿ-ಡೊಂಬರ ನೋಡಿ ನಗುವನಯ್ಯ ಕ