Skip to main content

Posts

Showing posts from January 21, 2011

ಬಸವಣ್ಣನ ವಚನಗಳು - 241 ರಿಂದ 250 ರವರೆಗೆ

೨೪೧. ಭಿತ್ತಿಯಿಲ್ಲದೆ ಬರೆಯಬಹುದೆ ಚಿತ್ತಾರವ ? ಬಿತ್ತಿ ಬೆಳೆಯಬಹುದೆ ಧರೆಯಿಲ್ಲದೆ ? ಜಂಗಮವಿಲ್ಲದೆ ಮಾಡಬಹುದೆ, ರೂಢೀಶನ ಭೇದಿಸಬಹುದೆ ? ಒಡಲಿಲ್ಲದ ನಿರಾಳಕರ್ತೃ ಕೂಡಲಸಂಗಮದೇವ ಜಂಗಮಮುಖಲಿಂಗವಾದನಾಗಿ ಮತ್ತೊಂದನರಿಯೆನಯ್ಯ. ೨೪೨. ಕೆಂಡದಲ್ಲಿಟ್ಟರೆ ಕೈ ಬೆಂದುದೆಂಬರು; ಕೊಂಡಿಟ್ಟವನ ಕೈ ಮುನ್ನವೇ ಬೆಂದುದು! ನೊಂದೆ ನಾನು ನೊಂದೆನಯ್ಯ. ಬೆಂದೆ ನಾನು ಬೆಂದೆನಯ್ಯ. ಕೂಡಲಸಂಗನ ಶರಣರ ಕಂಡು ಕಾಣದಂತಿದ್ದರೆ ಅಂದೇ ಬೆಂದೆನಯ್ಯ. ೨೪೩. ಲಾಂಛನವ ಕಂಡು ನಂಬುವೆ, ಅವರಂತರಂಗವ ನೀವೇ ಬಲ್ಲಿರಿ. ತೊತ್ತಿಂಗೆ ತೊತ್ತುಗೆಲಸವಲ್ಲದೆ ಅರಸರ ಸುದ್ದಿ ಎಮಗೇಕಯ್ಯ ? ರತ್ನಮೌಕ್ತಿಕದಚ್ಚು ಕೂಡಲಸಂಗಮದೇವ, ನಿಮ್ಮ ಶರಣರು. ೨೪೪. ಎಡದ ಕೈಯಲ್ಲಿ ನಿಗಳವನಿಕ್ಕಿ, ಬಲದ ಕೈಯ್ಯ ಕಡಿದುಕೊಂಡರೆ, ನೋಯದಿಪ್ಪುದೇ, ಅಯ್ಯ ? ಪ್ರಾಣ ಒಂದಾಗಿ ದೇಹ ಬೇರಿಲ್ಲ. ಲಿಂಗವ ಪೂಜಿಸಿ ಜಂಗಮವನುದಾಸೀನ ಮಾಡಿದರೆ ಬೆಂದೆನಯ್ಯ ನಾನು, ಕೂಡಲಸಂಗಮದೇವ. ೨೪೫. ತನುವ ನೋಯಿಸಿ, ಮನವ ಬಳಲಿಸಿ ನಿಮ್ಮ ಪಾದವಿಡಿದವರೊಳರೆ ? ಈ ನುಡಿ ಸುಡದಿಹುದೆ ? ಕೂಡಲಸಂಗಮದೇವ, ಶಿವಭಕ್ತರ ನೋವೇ ಅದು ಲಿಂಗದ ನೋವು! ೨೪೬. ಕುದುರೆ ಸತ್ತಿಗೆಯವರ ಕಂಡರೆ ಹೊರಳಿಬಿದ್ದು ಕಾಲ ಹಿಡಿವರಯ್ಯ. ಬಡಭಕ್ತರು ಬಂದರೆ, ಎಡೆಯಿಲ್ಲ ಅತ್ತ ಸನ್ನಿ ಎಂಬರು. ಎನ್ನೊಡೆಯ ಕೂಡಲಸಂಗಯ್ಯನವರ ತಡೆಗೆಡಹಿ ಮೂಗ ಕೊಯ್ಯದೆ ಮಾಬನೆ ? ೨೪೭. ಅಡ್ಡದೊಡ್ಡ ನಾನಲ್ಲಯ್ಯ. ದೊಡ್ಡ ಬಸಿರು ಎನಗಿಲ್ಲವಯ್ಯ. ದೊಡ್ಡವರನಲ್ಲದೆ ನಿಮ್ಮ ಶರಣರು ಮನ್ನಿಸರಯ್ಯ. ಹ