Skip to main content

Posts

ಸರ್ವಜ್ಞನ ವಚನಗಳು - 31 ರಿಂದ 40

ಸರ್ವಜ್ಞನ ವಚನಗಳು -  31 ರಿಂದ 40 ೩೧. ಕಾಯ ಕಮಲದ ಸಜ್ಜೆ, ಜೀವರತನುವೆ ಲಿಂಗ ಭವ ಪುಶ್ಪದಿಂ ಶಿವಪೂಜೆ ಮಾಡುವರ ದೇವರೆಂದೆಂಬೆ ಸರ್ವಜ್ಞ ೩೨. ಓದು ವಾದಗಳೇಕೆ, ಗಾದಿಯ ಮಾತೇಕೆ ವೇದ ಪುರಾಣ ನಿನಗೇಕೆ? ಲಿಂಗದಾ ಹಾದಿಯರಿದವಗೆ ಸರ್ವಜ್ಞ ೩೩. ಒಪ್ಪಾದ ನುಡಿಯೇಕೆ? ಪುಷ್ಪವೇರಿಸಲೇಕೆ? ಅರ್ಪಿತನ ಗೊಡವೆ ತನಗೇಕೆ? ಲಿಂಗದ ನೆಪ್ಪನರಿದವಗೆ ಸರ್ವಜ್ಞ ೩೪. ಗಂಗೆ ಗೋದಾವರಿಯು, ತುಂಗಭದ್ರೆಯು ಮತ್ತೆ ಹಿಂಗದೆ ಮುಳುಗಿ ಫಲವೇನು? ನಿನ್ನಲ್ಲೆ ಲಿಂಗದರುವಿಲ್ಲ ಸರ್ವಜ್ಞ ೩೫. ಮೆಟ್ಟಿದಾ ಕಲ್ಲಿಂಗೆ, ಮೊಟ್ಟೆ ಪತ್ರಿಯ ಹಾಕಿ ಕಟ್ಟಿದಾ ಲಿಂಗ ಅಡಿಮಾಡಿ ಶರಣೆಂಬ ಭ್ರಷ್ಟನ ಕಂಡ್ಯಾ ? ಸರ್ವಜ್ಞ ೩೬. ಗುರುವಿಂದ ಬಂಧುಗಳು, ಗುರುವಿಂದ ದೈವಗಳು ಗುರುವಿಂದಲಿಹುದು ಪುಣ್ಯವದು, ಜಗಕೆಲ್ಲ ಗುರುವಿಂದ ಮುಕ್ತಿ ಸರ್ವಜ್ಞ ೩೭. ಶಿವಪೂಜೆ ಮಾಡಿದಡೆ, ಶಿವನ ಕೊಂಡಾಡಿದಡೆ ಶಿವನಲ್ಲಿ ನೆನೆಹ ನಿಲಿಸಿದಡೆ ಶಿವಲೋಕ ವವಗೆ ಕಾಣಯ್ಯ ಸರ್ವಜ್ಞ ೩೮. ನಿಷ್ಠೆ ಇದ್ದಡೆ ಶಿವನು, ಗಟ್ಟಿಗೊಂಡೊಳಗಿರ್ಪ ನಿಷ್ಠೆಯಿಲ್ಲದಲೆ ಭಜಿಸಿದೊಡೆ ಶಿವನವನ ಬಿಟ್ಟು ಬಯಲಪ್ಪ ಸರ್ವಜ್ಞ ೩೯. ಇಟ್ಟಾವಿಭೂತಿ ತಾ ಪಟ್ಟಗಟ್ಟಿರುತಿಕ್ಕು ಇಟ್ಟಾವಿಭೂತಿಯರಿಯದಿರೆ ಸೀಳಿದಾ ಬಟ್ಟೆಯಂತಕ್ಕು ಸರ್ವಜ್ಞ ೪೦. ಲಿಂಗದಲಿ ಮನವಾಗಿ, ಲಿಂಗದಲಿ ನೆನಹಾಗಿ ಲಿಂಗದಲಿ ನೋಟ, ನುಡಿಕೂಟವಾದವನು ಲಿಂಗವೇ ಅಕ್ಕು ಸರ್ವಜ್ಞ

ಸರ್ವಜ್ಞನ ವಚನಗಳು - 21 ರಿಂದ 30

ಸರ್ವಜ್ಞನ ವಚನಗಳು -  21 ರಿಂದ 30 ೨೧. ಅಂಜದಲೆ ಕೊಂಡಿಹರೆ ನಂಜು ಅಮೃತವದಕ್ಕು ಅಂಜಿ ಅಳುಕುತಲಿ ಕೊಂಡಿಹರೆ, ಅಮೃತವು ನಂಜಿನಂತಕ್ಕು ಸರ್ವಜ್ಞ ೨೨. ಎಂಜಲೂ ಅಶೌಚ ಸಂಜೆಯೆಂದೆನಬೇಡ ಕುಂಜರವು ವನವ ನೆನವಂತೆ ಬಿಡದೆನಿ ರಂಜನನ ನೆನೆಯೊ ಸರ್ವಜ್ಞ ೨೩. ಭೂತೇಶಗೆರಗುವನು ಜಾತಿ ಮಾದಿಗನಲ್ಲ ಜಾತಿಯಲಿ ಹುಟ್ಟಿ ಶಿವನಿಗೆ ಶರಣೆನ್ನ ದಾತ ಮಾದಿಗನು ಸರ್ವಜ್ಞ ೨೪. ಕುಲಗೆಟ್ಟವರು ಚಿಂತೆ ಯೊಳಗಿಪ್ಪರಂತಲ್ಲ ಕುಲಗೆಟ್ಟು ಶಿವನ ಮರೆಹೊಕ್ಕ ಋಷಿಗಳಿಗೆ ಕುಲಗೋತ್ರವುಂಟೆ? ಸರ್ವಜ್ಞ ೨೫. ಜಾತಿಹೀನನ ಮನೆಯ ಜ್ಯೊತಿ ತಾ ಹೀನವೆ? ಜಾತಂಗೆ ಜಾತನೆನಲೇಕೆ? ಅರುವಿಡಿ ದಾತನೇ ಜಾತ ಸರ್ವಜ್ಞ ೨೬. ಯಾತರ ಹೂವೇನು ? ನಾತವಿದ್ದರೆ ಸಾಕು ಜಾತಿಯಲಿ ಜಾತಿಯೆನಬೇಡ ಶಿವನೊಲಿ ದಾತನೆ ಜಾತ ಸರ್ವಜ್ಞ ೨೭. ಅಕ್ಕರವು ತರ್ಕಕ್ಕೆ ಲೆಕ್ಕವು ಗಣಿತಕ್ಕೆ ಮಿಕ್ಕವೋದುಗಳು ತಿರುಪೆಗೆ ಮೋಕ್ಷಕಾ ರಕ್ಕರವೇ ಸಾಕು ಸರ್ವಜ್ಞ ೨೮. ಎಲ್ಲರನು ನೆರೆ ಬೇಡಿ, ಹಲ್ಲು ಬಾಯ್ದೆರೆಯುವರೇ? ಬಲ್ಲಿದಾ ಶಿವನ ಭಜಿಸಿದರೆ ಶಿವ ತಾನು ಇಲ್ಲೆನ್ನಲರಿಯನು ಸರ್ವಜ್ಞ ೨೯. ಇಂದ್ರನಾನೆಯನೇರಿ ಒಂದನೂ ಕೊಡಲರಿಯ ಚಂದ್ರಶೇಖರನು ಮುದಿ ಎತ್ತನೇರಿ ಬೇ ಕೆಂದುದನು ಕೊಡುವ ಸರ್ವಜ್ಞ ೩೦. ಸಾರವನು ಬಯಸುವರೆ, ಕ್ಷಾರವನು ಬೆರಿಸುವುದು ಮಾರಸಂಹರನ ನೆನೆದರೆ ಮೃತ್ಯುವು ದೂರಕ್ಕೆ ದೂರ ಸರ್ವಜ್ಞ

ಸರ್ವಜ್ಞನ ವಚನಗಳು - 11 ರಿಂದ 20

೧೧. ಹರನಿಚ್ಛೆಯಿಲ್ಲದಲೆ ಹರಿದು ಹೋಗದು ಪಾಪ ಹರಭಕ್ತಿಯುಳ್ಳ ಗುರುವರನು ಓರ್ವನೇ ನರ  ದೈವವೆಂಬೆ ಸರ್ವಜ್ಞ ೧೨. ಬಂಧುಗಳು ಆದವರು ಬಂದುಂಡು ಹೋಗುವರು ಬಂಧನವ ಕಳೆಯಲರಿಯರಾ  ಗುರುವಿಗಿಂತ ಬಂಧುಗಳುಂಟೆ ಸರ್ವಜ್ಞ ೧೩. ಜೀವ, ಸದ್ಗುರುನಾಥ, ಕಾಯ ಪುಸಿಯನೆ ತೋರಿ ಮಾಯನಾಶವನು ಹರಿಸುತ್ತ  ಶಿಷ್ಯಂಗೆ ತಾಯಿಯಂತಾದ ಸರ್ವಜ್ಞ ೧೪. ತಂದೆಗೂ ಗುರುವಿಗೂ ಒಂದು ಅಂತರವುಂಟು ತಂದೆ ತೋರುವನು ಸದ್ಗುರುವ.  ಗುರುರಾಯ ಬಂಧನವ ಕಳೆವ ಸರ್ವಜ್ಞ ೧೫. ಗುರುವಿಂಗೆ ದೈವಕ್ಕೆ, ಹಿರಿದು ಅಂತರವುಂಟು ಗುರುತೋರ್ವ ದೈವದೆಡೆಯನು  ದೈವತಾ ಗುರುವ ತೋರುವನೇ? ಸರ್ವಜ್ಞ ೧೬. ಗುರುಪಾದಕೆರಗಿದರೆ, ಶಿರಸು ತಾ ಮಣಿಯಕ್ಕು ಪರಿಣಾಮವಕ್ಕು ಪದವಕ್ಕು  ಕೈಲಾಸ ನೆರಮನೆಯಕ್ಕು ಸರ್ವಜ್ಞ ೧೭. ಒಂದರೊಳಗೆಲ್ಲವು ಸಂದಿಸುವದನು ಗುರು ಚಂದದಿಂ ತೋರಿಕೊಡದಿರಲು  ಶೊಷ್ಯನವ ಕೊಂದನೆಂದರಿಗು ಸರ್ವಜ್ಞ ೧೮. ಲಿಂಗಕ್ಕೆ ಕಡೆ ಎಲ್ಲಿ, ಲಿಂಗದೆಡೆ ಎಲ್ಲಿ ಲಿಂಗದೊಳು ಜಗವು ಅಡಗಿಹುದು  ಲಿಂಗವನು ಹಿಂಗಿದವರುಂಟೆ? ಸರ್ವಜ್ಞ ೧೯. ದೆಶಕ್ಕೆ ಸಜ್ಜನನು, ಹಾಸ್ಯಕ್ಕೆ ಹನುಮಂತ ಕೇಶವನು ಭಕ್ತರೊಳಗೆಲ್ಲ ಮೂರು  ಕ ಣ್ಣೇಶನೆ ದೈವ ಸರ್ವಜ್ಞ ೨೦. ಉಂಬಳಿಯ ಇದ್ದವನು ಕಂಬಳಿಯ ಹೊದೆಯುವನೇ? ಶಂಭುವಿರಲಿಕ್ಕೆ ಮತ್ತೊಂದು  ದೈವವ ನಂಬುವನೇ ಹೆಡ್ಡ ಸರ್ವಜ್ಞ

ಅಲ್ಲಮಪ್ರಭುವಿನ ವಚನಗಳು : 111 ರಿಂದ 120

೧೧೧. ಅಱಿದಱಿದು ಅಱಿವು ಬಱುದೊಱಿವೋಯಿತ್ತು ! "ಕುಱುಹ[ತೋಱ]ದಡೆಂತೂ ನಂಬರು, ತೆಱಹಿಲ್ಲದ ಘನವ ನೆನೆದು ಗುರುಶರಣೆಂಬುದಲ್ಲದೆ ಮಱಹು ಬಂದೀತೆಂ"ದು ಗುರು ಕುಱುಹ ತೋಱಿದನಲ್ಲದೆ ಬಲ್ಲಡೆ ಗುಹೇಶ್ವರಲಿಂಗವು ಹೃದಯದಲೈದಾನೆ. ೧೧೨. ಉದಕ ಮೂರುತಿಯಾಗಿ ಉದಯವಾಯಿತ್ತು ಪಿಂಡಿಗೆಯಲ್ಲಿ ಮೂಲ ಸ್ಥಾನ ಸ್ಥಾಪ್ಯವಾಯಿತ್ತು ಸ್ವದೇಹಶಿವಪುರದಲ್ಲಿ ! ವಾಯು ಪೂಜಾರಿಯಾಗಿ ಪರಿಮಳದಿಂಡೆದಂಡೆಯ ಕಟ್ಟಿ ಪೂಜಿಸುತ್ತಿರ್ದುದೋ ನವದ್ವಾರಶಿವಾಲಯದಾದಿಮಧ್ಯಸ್ಥಾನದಲ್ಲಿ ಗುಹೇಶ್ವರನೆಂಬುದಲ್ಲಿಯೆ ನಿಂದಿತ್ತು. ೧೧೩. ಕಾಲೇ ಕಂಭಗಳಾದವೆನ್ನ ದೇಹವೇ ದೇಗುಲವಾದುವಯ್ಯ ! ಎನ್ನ ನಾಲಗೆಯೆ ಘಂಟೆ ಶಿರ ಸುವರ್ಣದ ಕಳಸವಿದೇನಯ್ಯ ! ಸ್ವರವೇ ಲಿಂಗಕ್ಕೆ ಸಿಂಹಾಸನವಾಗಿರ್ದುದು ! ಗುಹೇಶ್ವರ, ನಿಮ್ಮ ಪ್ರಾಣಲಿಂಗಪ್ರತಿಷ್ಠೆ ಪಲ್ಲಟವಾಗದಂತಿದ್ದೆನಯ್ಯ. ೧೧೪. ಪ್ರಾಣಲಿಂಗಕ್ಕೆ ಕಾಯವೇ ಸೆಜ್ಜೆ ಆಕಾಶಗಂಗೆಯಲ್ಲಿ ಮಜ್ಜನ ಹೂವಿಲ್ಲದ ಪರಿಮಳದ ಪೂಜೆ ಹೃದಯಕಮಲದಲ್ಲಿ ಶಿವಶಿವಾ ಎಂಬ ಶಬ್ದ ಇದು ಅದ್ವೈತ ಕಾಣಾ ಗುಹೇಶ್ವರ. ೧೧೫. ಹೊತ್ತಾರೆ ಪೂಜಿಸಲುಬೇಡ ಕಂಡಾ ! ಬೈಗೆ ಪೂಜಿಸಲುಬೇಡ ಕಂಡಾ ! ಇರುಳುವನೂ ಹಗಲುವನೂ ಕಳೆದು ಪೂಜಿಸಬೇಕು ಕಂಡಾ ! ಇಂತಪ್ಪ ಪೂಜೆಯ ಪೂಜಿಸುವರ ಎನಗೆ ತೋಱಯ್ಯ ಗುಹೇಶ್ವರ. ೧೧೬. ಅಂಗದಲ್ಲಿ ಮಾಡುವ ಸುಖವದು ಲಿಂಗಕ್ಕೆ ಭೂಷಣವಾಯಿತ್ತು. ಕಾಡುಗಿಚ್ಚಿನ ಕೈಯಲ್ಲಿ ಕರಡವ ಕೊಯ್ಸುವಂತೆ- ಹಿಂದೆ ಮೆದೆಯಿಲ್ಲ ! ಮು...

ಅಲ್ಲಮಪ್ರಭುವಿನ ವಚನಗಳು : 101 ರಿಂದ 110

೧೦೧. ಪ್ರಣವಮಂತ್ರವ ಕರ್ಣದಲಿ ಹೇಳಿ ಶ್ರೀಗುರು ಶಿಷ್ಯನ ಅಂಗದ ಮೇಲೆ ಲಿಂಗಪ್ರತಿಷ್ಠೆಯ ಮಾಡಿದ ಬಳಿಕ ಪ್ರಾಣದಲಿ ಲಿಂಗವಿಪ್ಪುದೆಂಬ ವ್ರತಗೇಡಿಗಳ ಮಾತ ಕೇಳಲಾಗದು. ಒಳಗಿಪ್ಪನೇ ಲಿಂಗದೇವನು ಮಲ-ಮೂತ್ರ-ಮಾಂಸದ ಹೇಸಿಕೆಯೊಳಗೆ ? ಅಲ್ಲಿ ಪ್ರಾಣವಿಪ್ಪುದಲ್ಲದೆ ಲಿಂಗವಿಪ್ಪುದೇ ? ಆ ಪ್ರಾಣವ ತಂದು ತನ್ನ ಇಷ್ಟಲಿಂಗದಲ್ಲಿರಿಸಿ ನೆರೆಯ ಬಲ್ಲಡೆ ಆತನೆ ಪ್ರಾಣಲಿಂಗಸಂಬಂಧಿ ! ಅಲ್ಲದವರ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು ? ೧೦೨. ಕದಳಿಯ ಬನವ ಹೊಕ್ಕು ಹೊಲಬ ತಿಳಿಯದನ್ನಕ್ಕ, ಬಯಲ ಗಾಳಿಯ ಹಿಡಿದು ಘಟ್ಟಿ ಮಾಡದನ್ನಕ್ಕ, ಬಱಿದೆ ಬಹುದೇ ಶಿವಜ್ಞಾನ ? ಷಡುವರ್ಗವಳಿಯದನ್ನಕ್ಕ ಅಷ್ಟಮದವಳಿಯದನ್ನಕ್ಕ ಬಱಿದೆ ಬಹುದೇ ಶಿವಸಂಪದ ? ಮದಮತ್ಸರವ ಮಾಡಲಿಲ್ಲ ! ಹೊದಕುಳಿಗೊಳಲಿಲ್ಲ ಗುಹೇಶ್ವರಲಿಂಗ ಕಲ್ಪಿತದೊಳಗಲ್ಲ ! ೧೦೩. ಶಬ್ದ ಸ್ಪರ್ಶ ರೂಪ ರಸ ಗಂಧ ಪಂಚೇಂದ್ರಿಯ ಸಪ್ತಧಾತು ಅಷ್ಟಮದದಿಂದ ಮುಂದುಗಾಣದವರು ನೀವು ಕೇಳಿರೇ ! ಲಿಂಗವಾರ್ತೆಯ ವಚನರಚನೆಯ ಮಾತನಾಡುವಿರಯ್ಯ ! ಸಂಸಾರದ ಮುಚ್ಚು ಬಿಡದನ್ನಕ್ಕರ ಸೂಕ್ಷ್ಮಶಿವಪಥವು ಸಾಧ್ಯವಾಗದು. ಗುಹೇಶ್ವರಲಿಂಗದಲಿ ವಾಕು ಪಾಕವಾದಡೇನು ? ಮನ ಪಾಕವಾಗದನ್ನಕ್ಕರ ?! ೧೦೪. ಮರ್ತ್ಯಲೋಕದ ಮಾನವರು ದೇಗುಲದೊಳಗೊಂದು ದೇವರ ಮಾಡಿದಡೆ ಆನು ಬೆಱಗಾದೆನಯ್ಯ ! ನಿಚ್ಚಕ್ಕೆ ನಿಚ್ಚ ಅರ್ಚನೆಪೂಜನೆಯ ಮಾಡಿಸಿ ಭೋಗವ ಮಾಡುವರ ಕಂಡು ನಾನು ಬೆಱಗಾದೆನು ಗುಹೇಶ್ವರ, ನಿಮ್ಮ ಶರಣರು ಹಿಂದೆ ಲಿಂಗ...

ಅಲ್ಲಮಪ್ರಭುವಿನ ವಚನಗಳು : 91 ರಿಂದ 100

ಅಲ್ಲಮಪ್ರಭುವಿನ ವಚನಗಳು : 91 ರಿಂದ 100 ೯೧. ಲಿಂಗ ಒಳಗೋ ಹೊಱಗೋ ? ಬಲ್ಲಡೆ ನೀವು ಹೇಳಿರೇ ! ಲಿಂಗ ಎಡನೋ ಬಲನೋ ? ಬಲ್ಲಡೆ ನೀವು ಹೇಳಿರೇ ! ಲಿಂಗ ಮುಂದೋ ಹಿಂದೋ ? ಬಲ್ಲಡೆ ನೀವು ಹೇಳಿರೇ ! ಲಿಂಗ ಸ್ಥೂಲವೋ ಸೂಕ್ಷ್ಮವೋ ? ಬಲ್ಲಡೆ ನೀವು ಹೇಳಿರೇ ! ಲಿಂಗ ಪ್ರಾಣವೋ, ಪ್ರಾಣ ಲಿಂಗವೋ ? ಬಲ್ಲಡೆ ನೀವು ಹೇಳಿರೇ ? ಗುಹೇಶ್ವರ. ೯೨. ತನುವಿಂಗೆ ತನುವಾಗಿ ಮನಕ್ಕೆ ಮನವಾಗಿ ಜೀವಕ್ಕೆ ಜೀವವಾಗಿ ಇದ್ದುದನಾರು ಬಲ್ಲರೋ ?! ಅದು ದೂರವೆಂದು ಸಮೀಪವೆಂದು ಮಹಂತ ಗುಹೇಶ್ವರನೊಳಗೆಂದು ಹೊಱಗೆಂದು ಬಱುಸೂಱೆವೋದರು ! ಪ್ರಸಾದಿ ಸ್ಥಲ ೯೩. ಲಿಂಗಾರ್ಚನೆಯಿಲ್ಲದ ಮುನ್ನ ಸಿಂಗಿಯಾನಾರೋಗಿಸಿದಿರಿ ಸಂಜೆ ಸಮಾಧಿಗಳಿಲ್ಲದ ಮುನ್ನ ಉಂಡಿರಿ ಚೆನ್ನನ ಮನೆಯಲ್ಲಿ ಚಿತ್ರಗುಪ್ತರಱಿಯದ ಮುನ್ನ ಎತ್ತಿದಿರಿ ಕಾಂಚಿಯ ಪುರವ ಬೈಚಿಟ್ಟಿರಿ ಕೈಲಾಸವ ನಿಮ್ಮ ಚಿಕ್ಕುಟಾಧಾರದಲ್ಲಿ ಈರೇಳು ಭುವನಂಗಳೆಲ್ಲವೂ ನಿಮ್ಮ ರೋಮಕೂಪದಲ್ಲಡಗಿದವು ಪ್ರಾಣಾಪಾನ ವ್ಯಾನೋದಾನ ಸಮಾನರಹಿತ ಗುಹೇಶ್ವರ. ೯೪. ತ್ರಿವಿಧ ನಿತ್ಯವ ತ್ರಿವಿಧ ಅನಿತ್ಯವ ಬಲ್ಲವರಾರೋ ? ತ್ರಿವಿಧಕ್ಕೆ ತ್ರಿವಿಧವನಿತ್ತು ತ್ರಿವಿಧಪ್ರಸಾದದ ಕೊಳಬಲ್ಲಡೆ ಆತನ ಧೀರನೆಂಬೆ ! ಆತನ ಗುಹೇಶ್ವರಲಿಂಗದಲ್ಲಿ ಅಚ್ಚಪ್ರಸಾದಿಯೆಂಬೆ ! ೯೫. ಬೇಡದ ಮುನ್ನ ಮಾಡಬಲ್ಲಡೆ ಭಕ್ತ ಬೇಡುವನೆ ಲಿಂಗಜಂಗಮ ? ಬೇಡುವರಿಗೆಯೂ ಬೇಡಿಸಿಕೊಂಬವರಿಗೆಯೂ ಪ್ರಸಾದವಿಲ್ಲ ಗುಹೇಶ್ವರ. ೯೬. ಒಳಗ ತೊಳ...

ಅಲ್ಲಮಪ್ರಭುವಿನ ವಚನಗಳು : 81 ರಿಂದ 90

ಅಲ್ಲಮಪ್ರಭುವಿನ ವಚನಗಳು : 81 ರಿಂದ 90 ೮೧. ಮಜ್ಜನಕ್ಕೆಱೆವರೆಲ್ಲಾ ಇದ್ದಲ್ಲಿ ಫಲವೇನು ? ಮುದ್ರೆಧಾರಿಗಳಪ್ಪರಯ್ಯ ! ಲಿಂಗದಲ್ಲಿ ನಿಷ್ಠೆಯಿಲ್ಲ ಜಂಗಮದಲ್ಲಿ ಪ್ರೇಮಿಗಳಲ್ಲ ವೇಷಲಾಂಛನಧಾರಿಗಳಪ್ಪರಯ್ಯ ! ನೋಡಿ ಮಾಡುವ ಭಕ್ತಿ ಸಜ್ಜನಸಾರಾಯವಲ್ಲ ಗುಹೇಶ್ವರ ಮೆಚ್ಚನಯ್ಯ ! ೮೨. ಕೊಟ್ಟ ಕುದುರೆಯನೇಱಲಱಿಯದೆ ಮತ್ತೊಂದು ಕುದುರೆಯ ಬಯಸುವರು ವೀರರೂ ಅಲ್ಲ ! ಧೀರರೂ ಅಲ್ಲ !! ಇದು ಕಾರಣ ನೆಱೆ ಮೂಱು ಲೋಕವೆಲ್ಲವೂ ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ ಗುಹೇಶ್ವರನೆಂಬ ಲಿಂಗವನವರೆತ್ತಬಲ್ಲರೋ ? ೮೩. ಜೀವವಿಲ್ಲದ ಹೆಣನ ಹಿಡಿದಾರುವರಯ್ಯ ಪ್ರತಿಯಿಲ್ಲದ ಪ್ರತಿಗೆ ಪ್ರತಿಯ ಮಾಡುವರಯ್ಯ ಶಿರವಿಲ್ಲದ ಮುಂಡಕ್ಕೆ ಸೇಸೆಯನಿಕ್ಕುವರು ಗುಹೇಶ್ವರ ! ೮೪. ಆದ್ಯರಲ್ಲ ! ವೇದ್ಯರಲ್ಲ ! ಸಾಧ್ಯರಲ್ಲದ ಹಿರಿಯರ ನೋಡಾ ! ತನುವಿಕಾರ ! ಮನವಿಕಾರ ! ಇಂದ್ರಿಯವಿಕಾರದ ಹಿರಿಯರ ನೋಡಾ ! ಶಿವಚಿಂತೆ ಶಿವಜ್ಞಾನಿಗಳ ಕಂಡರೆ ಅಳವಾಡಿ ನುಡಿವರು ಗುಹೇಶ್ವರನಱಿಯದ ಕರ್ಮಿಗಳಯ್ಯ ! ೮೫. ಆಳವಱಿಯದ ಭಾಷೆ ಬಹುಕುಳವಾದ ನುಡಿ ಇಂತೆರಡಱ ನುಡಿ ಹುಸಿಯಯ್ಯ ! ಬಹುಭಾಷಿತರು, ಸುಭಾಷಿತವರ್ಜಿತರು "ಶರಣಸತಿ ಲಿಂಗಪತಿ" ಎಂಬರು ಹುಸಿಯಯ್ಯ ! ಇಂತಪ್ಪವರ ಕಂಡು ನಾಚಿದೆನಯ್ಯ ಗುಹೇಶ್ವರ. ೮೬. ದೇಶ ಗುಱಿಯಾಗಿ ಲಯವಾಗಿ ಹೋದವರ ಕಂಡೆ ! ತಮಂಧ ಗುಱಿಯಾಗಿ ಲಯವಾಗಿ ಹೋದವರ ಕಂಡೆ ! ಕಾಮ ಗುಱಿಯಾಗಿ ಬೆಂದುಹೋದವರ ಕಂಡೆ ! ನೀ...