Skip to main content

Posts

ಸರ್ವಜ್ಞನ ವಚನಗಳು - 141 ರಿಂದ 150

೧೪೧. ಅಂತಕ್ಕು ಇಂತಕ್ಕು | ಎಂತಕ್ಕು ಎನಬೇಡ ಚಿಂತಿಸಿ ಸುಯ್ವುತಿರಬೇಡ ಶಿವನಿರಿಸಿ ದಂತಿಹುದೆ ಲೇಸು ಸರ್ವಜ್ಞ ೧೪೨. ಸಿರಿಯು ಸಂಸಾರವು | ಸ್ಥಿರವೆಂದು ನಂಬದಿರು ಹಿರಿದೊಂದು ಸಂತೆ ನೆರೆದೊಂದು - ಜಾವಕ್ಕೆ ಹರೆದು ಹೋಹಂತೆ ಸರ್ವಜ್ಞ ೧೪೩. ದಂತಪಂಕ್ತಿಗಳೊಳಗೆ | ಎಂತಿಕ್ಕು ನಾಲಗೆಯು ಸಂತತ ಖಳರ ಒಡನಿರ್ದು - ಬಾಳುವು ದಂತೆ ಕಂಡಯ್ಯ ಸರ್ವಜ್ಞ ೧೪೪. ಹಸಿಯದಿರೆ ಕಡುಗಾದ | ಬಿಸಿನೀರ ಕೊಂಬುದು ಹಸಿವಕ್ಕು ಸಿಕ್ಕ ಮಲ ಬಿಡುಗು - ದೇಹ ತಾ ಸಸಿನವಾಗುವುದು ಸರ್ವಜ್ಞ ೧೪೫. ಹಸಿವಿಲ್ಲದುಣಬೇಡ | ಹಸಿದು ಮತ್ತಿರಬೇಡ ಬಿಸಿ ಬೇಡ ತಂಗುಳವು ಬೇಡ - ವೈದ್ಯನ ಗಸಣಿಸಿಯೇ ಬೇಡ ಸರ್ವಜ್ಞ ೧೪೬. ಜಾತಿ ಹೀನನ ಮನೆಯ | ಜ್ಯೋತಿ ತಾ ಹೀನವೇ ಜಾತಿ-ವಿಜಾತಿಯೆನಬೇಡ - ದೇವನೊಲಿ ದಾತನೇ ಜಾತ ಸರ್ವಜ್ಞ ೧೪೭. ಕ್ಷಣಮಾತ್ರವಾದರೂ | ಗುಣಿಗಳೊಡನಾಡುವುದು ಗುಣಹೀನರುಗಳ ಒಡನಾಟ - ಬಹುದುಃಖ ದಣಲೊಳಿರ್ದಂತೆ ಸರ್ವಜ್ಞ ೧೪೮. ಬಸವ ಗುರುವಿನ ಹೆಸರ | ಬಲ್ಲವರಾರಿಲ್ಲ ಪುಸಿಮಾತನಾಡಿ ಕೆಡದಿರಿ - ಲೋಕಕ್ಕೆ ಬಸವನೇ ಕರ್ತ ಸರ್ವಜ್ಞ ೧೪೯. ಹಸಿದೊಡಂಬಲಿ ಮುದ್ದು | ಬಿಸಿಲಿಗೆ ಕೊಡೆ ಮುದ್ದು ಬಸುರಲ್ಲಿ ಬಂದ ಶಿಶು ಮುದ್ದು - ಲೋಕಕ್ಕೆ ಬಸವಣ್ಣನೇ ಮುದ್ದು ಸರ್ವಜ್ಞ ೧೫೦. ಕತ್ತೆ ಬೂದಿಯ ಹೊರಳಿ | ಭಕ್ತನಂತಾಗುವುದೆ ತತ್ವವರಿಯದಲೆ ಭಸಿತವಿಟ್ಟರೆ ...

ಸರ್ವಜ್ಞನ ವಚನಗಳು - 131 ರಿಂದ 140

೧೩೧. ಅಂಗವನು ಲಿಂಗವನು | ಸಂಗೊಳಿಸಲೆಂತಕ್ಕು ? ಲಿಂಗದೆ ನೆನಹು ಘನವಾಗೆ - ಆ ಅಂಗ ಲಿಂಗವಾಗಿಕ್ಕು ಸರ್ವಜ್ಞ ೧೩೨. ಕಂಗಳಿಚ್ಛೆಗೆ ಪರಿದು | ಭಂಗಗೊಳದಿರು ಮನುಜ ಲಿಂಗದಲಿ ಮನವ ನಿಲ್ಲಿಸಿ - ಸತ್ಯದಿ ನಿಲೆ ಲಿಂಗವೇಯಹೆಯೊ ಸರ್ವಜ್ಞ ೧೩೩. ಓದುವಾದಗಳೇಕೆ | ಗಾದೆಯ ಮಾತೇಕೆ ವೇದ-ಪುರಾಣ ನಿನಗೇಕೆ - ಲಿಂಗದ ಹಾದಿಯನರಿದವಗೆ ಸರ್ವಜ್ಞ ೧೩೪. ನೋಟ ಶಿವಲಿಂಗದಲಿ | ಕೂಟ ಜಂಗಮದಲ್ಲಿ ನಾಟಿ ತನು ಗುರುವಿನಲಿ ಕೂಡೆ - ಭಕ್ತನ ಸ ಘಾಟವದು ನೋಡ ಸರ್ವಜ್ಞ ೧೩೫. ನಾನು-ನೀನುಗಳಳಿದು | ತಾನೆ ಲಿಂಗದಿ ನಿಂದು ನಾನಾ ಭ್ರಮೆಗಳ ನೆರೆ ಹಿಂಗಿ - ನಿಂದವನು ತಾನೈಕ್ಯ ನೋಡ ಸರ್ವಜ್ಞ ೧೩೬. ತನ್ನ ನೋಡಲಿಯೆಂದು | ಕನ್ನಡಿ ಕರೆವುದೇ ತನ್ನಲ್ಲಿ ಜ್ಞಾನ ಉದಿಸಿದ - ಮಹತುಮನು ಕನ್ನಡಿಯಂತೆ ಸರ್ವಜ್ಞ ೧೩೭. ಹೆಣ್ಣನು ಹೊನ್ನನು | ಹಣ್ಣಾದ ಮರವನು ಕಣ್ಣಲಿ ಕಂಡು - ಮನದಲಿ ಬಯಸದ ಅಣ್ಣಗಳಾರು ಸರ್ವಜ್ಞ ೧೩೮. ತಿರಿದು ತಂದಾದೊಡಂ | ಕರೆದು ಜಂಗಮಕಿಕ್ಕು ಪರಿಣಾಮವಕ್ಕು ಪದವಕ್ಕು - ಕೈಲಾಸ ನೆರೆಮನೆಯಕ್ಕು ಸರ್ವಜ್ಞ ೧೩೯. ಆಡದೆಲೆ ಕೊಡುವವನು | ರೂಢಿಯೊಳಗುತ್ತಮನು ಆಡಿ ಕೊಡುವವನು ಮಧ್ಯಮನು - ಅಧಮ ತಾನಾಡಿಯೂ ಕೊಡದವನು ಸರ್ವಜ್ಞ ೧೪೦. ಮಾನವನ ದುರ್ಗುಣವ | ನೇನೆಂದು ಬಣ್ಣಿಸುವೆ ದಾನಗೈಯಲು ಕನಲುವ - ದಂಡವನು ಮೋನದಿಂ ತೆರುವ ಸರ್ವಜ್ಞ

ಸರ್ವಜ್ಞನ ವಚನಗಳು - 121 ರಿಂದ 130

೧೨೧. ಓರ್ವನಲ್ಲದೆ ಮತ್ತೆ | ಈರ್ವರುಂಟೇ ಮರುಳೆ ಸರ್ವಜ್ಞನೋರ್ವ ಜಗಕೆಲ್ಲ - ಕರ್ತಾರ ನೋರ್ವನೇ ದೇವ ಸರ್ವಜ್ಞ ೧೨೨. ಎಂಜಲು ಶೌಚವು | ಸಂಜೆಯೆಂದೆನ ಬೇಡ ಕುಂಜರ ವನವ ನೆನೆವಂತೆ - ಬಿಡದೆ ನಿ ರಂಜನನ ನೆನೆಯ ಸರ್ವಜ್ಞ ೧೨೩. ಭೂತೇಶ ಶರಣೆಂಬ | ಜಾತಿ ಮಾದಿಗನಲ್ಲ ಜಾತಿಯಲಿ ಹುಟ್ಟಿ ಭೂತೇಶ - ಶರಣೆನ್ನ ದಾತ ಮಾದಿಗನು ಸರ್ವಜ್ಞ ೧೨೪. ಯಾತರ ಹೂವಾದರು | ನಾತರೆ ಸಾಲದೆ ಜಾತಿ-ವಿಜಾತಿ ಯೆನಬೇಡ - ಶಿವನೊಲಿ ದಾತನೇ ಜಾತಿ ಸರ್ವಜ್ಞ ೧೨೫. ಮಾಯಾಮೋಹವ ನೆಚ್ಚಿ | ಕಾಯವನು ಕರಗಿಸುತೆ ಆಯಾಸಗೊಳುತ ಇರಬೇಡ - ಓಂ ನಮಶ್ಯಿ ವಾಯವೆಂದೆನ್ನಿ ಸರ್ವಜ್ಞ ೧೨೬. ಮುನಿವಂಗೆ ಮುನಿಯದಿರು | ಕನೆವಂಗೆ ಕನೆಯದಿರು ಮನಸಿಜಾರಿಯನು ಮರೆಯದಿರು - ಶಿವನ ಕೃಪೆ ಘನಕೆ ಘನವಕ್ಕು ಸರ್ವಜ್ಞ ೧೨೭. ನರರ ಬೇಡುವ ದೈವ | ವರವೀಯ ಬಲ್ಲುದೇ ತಿರಿವವರನಡರಿ ತಿರಿವಂತೆ - ಅದನರಿ ಹರನನೆ ಬೇಡು ಸರ್ವಜ್ಞ ೧೨೮. ಲಿಂಗವ ಪೂಜಿಸುವಾತ | ಜಂಗಮಕೆ ನೀಡದೊಡೆ ಲಿಂಗದ ಕ್ಷೋಭೆ ಘನವಕ್ಕು - ಮಹಲಿಂಗ ಹಿಂಗುವುದು ಅವನ ಸರ್ವಜ್ಞ ೧೨೯. ಉಣ ಬಂದ ಲಿಂಗಕ್ಕೆ | ಉಣಲಿಕ್ಕದಂತಿರಿಸಿ ಉಣದಿರ್ಪ ಲಿಂಗಕ್ಕುಣ ಬಡಿಸಿ - ಕೈ ಮುಗಿವ ಬಣಗುಗಳ ನೋಡ ಸರ್ವಜ್ಞ ೧೩೦. ಒಮ್ಮನದಲ್ಲಿ ಶಿವಪೂಜೆಯ | ಗಮ್ಮನೆ ಮಾಡುವುದು ಇಮ್ಮನವಿಡಿದು ಕೆಡಬೇಡ - ವಿಧಿವಶವು ಸುಮ್ಮನೆ ಕೆಡಗು ಸರ್...

ಸರ್ವಜ್ಞನ ವಚನಗಳು - 111 ರಿಂದ 120

೧೧೧. ಮೊಸರ ಕಡೆಯಲು ಬೆಣ್ಣೆ | ಒಸೆದು ತೋರುವ ತೆರದಿ ಹಸನುಳ್ಳ ಗುರುವಿನುಪದೇಶ - ದಿಂ ಮುಕ್ತಿ ವಶವಾಗದಿಹುದೆ ಸರ್ವಜ್ಞ ೧೧೨. ಗುರುಪಾದ ಸೇವೆ ತಾ ದೊರಕೊಂಡಿತಾದೊಡೆ ಹಿರಿದಪ್ಪ ಪಾಪ ಹರೆವುದು - ಕರ್ಪುರದ ಗಿರಿಯ ಸುಟ್ಟಂತೆ ಸರ್ವಜ್ಞ ೧೧೩. ಎತ್ತಾಗಿ ತೊತ್ತಾಗಿ | ಹಿತ್ತಿಲದ ಗಿಡವಾಗಿ ಮತ್ತೆ ಪಾದದ ಕೆರವಾಗಿ - ಗುರುವಿನ ಹತ್ತಿಲಿರು ಎಂದ ಸರ್ವಜ್ಞ ೧೧೪. ಸಾಣೆಕಲ್ಲೊಳು ಗಂಧ | ಮಾಣದೆ ಎಸೆವಂತೆ ಜಾಣ ಶ್ರೀಗುರುವಿನುಪದೇಶ - ದಿಂ ಮುಕ್ತಿ ಕಾಣಿಸುತಿಹುದು ಸರ್ವಜ್ಞ ೧೧೫. ಬೆಟ್ಟ ಕರ್ಪುರ ಉರಿದು | ಬೊಟ್ಟಿಡಲು ಬೂದಿಲ್ಲ ನೆಟ್ಟನೆ ಗುರುವಿನರಿದನ - ಕರ್ಮವು ಮುಟ್ಟಲಂಜುವವು ಸರ್ವಜ್ಞ ೧೧೬. ವಿಷಯಕ್ಕೆ ಕುದಿಯದಿರು | ಅಶನಕ್ಕೆ ಹದೆಯದಿರು ಅಸಮಾಕ್ಷನಡಿಯನಗಲದಿರು - ಗುರುಕರುಣ ವಶವರ್ತಿಯಹುದು ಸರ್ವಜ್ಞ ೧೧೭. ತಂದೆಗೆ ಗುರುವಿಗೆ | ಒಂದು ಅಂತರವುಂಟು ತಂದೆ ತೋರುವನು ಶ್ರೀಗುರುವ - ಗುರುರಾಯ ಬಂಧನವ ಕಳೆವ ಸರ್ವಜ್ಞ ೧೧೮. ಹಸಿಯ ಸೌದೆಯ ತಂದು | ಹೊಸೆದರುಂಟೇ ಕಿಚ್ಚು ವಿಷಯಂಗಳುಳ್ಳ ಮನುಜರಿಗೆ - ಗುರುಕರುಣ ವಶವರ್ತಿಯಹುದೆ ಸರ್ವಜ್ಞ ೧೧೯. ಒಂದೂರ ಗುರುವಿರ್ದು | ವಂದನೆಯ ಮಾಡದೆ ಸಂಧಿಸಿ ಕೂಳ ತಿನುತಿರ್ಪವನ - ಇರವು ಹಂದಿಯ ಇರವು ಸರ್ವಜ್ಞ ೧೨೦. ಲಿಂಗದ ಗುಡಿಯೆಲ್ಲಿ ? ಲಿಂಗಿಲ್ಲದೆಡೆಯೆಲ್ಲಿ ? ಲಿಂಗದೆ ಜ...

ಸರ್ವಜ್ಞನ ವಚನಗಳು - 101 ರಿಂದ 110

೧೦೧. ಎಲುವಿನ ಕಾಯಕ್ಕೆ | ಸಲೆ ಚರ್ಮವನು ಹೊದಿಸಿ ಮಲ-ಮೂತ್ರ-ಕ್ರಿಮಿಯು ಒಳಗಿರ್ಪ - ದೇಹಕ್ಕೆ ಕುಲವಾವುದಯ್ಯ ಸರ್ವಜ್ಞ ೧೦೨. ಹೊಲಸು ಮಾಂಸದ ಹುತ್ತು | ಎಲುವಿನ ಹಂಜರವು ಹೊಲೆ ಬಲಿದ ತನುವಿನೊಳಗಿರ್ದು - ಮತ್ತದರ ಕುಲವನೆಣಿಸುವರೆ ಸರ್ವಜ್ಞ ೧೦೩. ದಿಟವೆ ಪುಣ್ಯದ ಪುಂಜ | ಸಟೆಯೆ ಪಾಪದ ಬೀಜ ಕುಟಿಲ ವಂಚನೆಯ ಪೊಗದಿರು - ನಿಜವ ಪಿಡಿ ಘಟವ ನೆಚ್ಚದಿರು ಸರ್ವಜ್ಞ ೧೦೪. ಸುರತರು ಮರನಲ್ಲ | ಸುರಭಿಯೊಂದಾವಲ್ಲ ಪರುಷ ಪಾಷಾಣದೊಳಗಲ್ಲ - ಗುರುವು ತಾ ನರರೊಳಗಲ್ಲ ಸರ್ವಜ್ಞ ೧೦೫. ಜ್ಯೋತಿಯಿಂದವೆ ನೇತ್ರ | ರಾತ್ರಿಯಲಿ ಕಾಂಬಂತೆ ಸೂತ್ರದಲಿ ಧಾತನರಿವಂತೆ - ಶಿವನ ಗುರು ನಾಥನಿಂದರಿಗು ಸರ್ವಜ್ಞ ೧೦೬. ಮಂಡೆ ಬೋಳಾದೊಡಂ | ದಂಡು ಕೋಲ್ವಿಡಿದೊಡಂ ಹೆಂಡತಿಯ ಬಿಟ್ಟು ನಡೆದೊಡಂ - ಗುರುಮುಖವ ಕಂಡಲ್ಲದಿಲ್ಲ ಸರ್ವಜ್ಞ ೧೦೭. ಬ್ರಹ್ಮವೆಂಬುದು ತಾನು | ಒಮ್ಮಾರು ನೀಳವೇ ಒಮ್ಮೆ ಸದ್ಗುರುವಿನುಪದೇಶ - ವಾಲಿಸಲು ಗಮ್ಮನೆ ಮುಕ್ತಿ ಸರ್ವಜ್ಞ ೧೦೮. ಊರಿಂಗೆ ದಾರಿಯ | ನಾರು ತೋರಿದರೇನು ಸಾರಾಯಮಪ್ಪ ಮತವನರುಹಿಸುವ ಗುರು ಆರಾದೊಡೇನು ಸರ್ವಜ್ಞ ೧೦೯. ತುಪ್ಪವಾದಾ ಬಳಿಕ | ಹೆಪ್ಪನೆರೆದವರುಂಟೆ ನಿಃಪತ್ತಿಯಾದ ಗುರುವಿನುಪದೇಶದಿಂ ತಪ್ಪದೇ ಮುಕ್ತಿ ಸರ್ವಜ್ಞ ೧೧೦. ಪರುಷ ಲೋಹವ ಮುಟ್ಟಿ | ವರುಷವಿರಬಲ್ಲುದೇ ಪರುಷವೆಂತಂತೆ ಶಿಷ್ಯಂಗೆ ...

ಸರ್ವಜ್ಞನ ವಚನಗಳು - 91 ರಿಂದ 100

ಸರ್ವಜ್ಞನ ವಚನಗಳು -  91 ರಿಂದ 100 ೯೧. ಹುಟ್ಟಿಸುವನಜನೆಂಬ, ಕಷ್ಟದಾ ನುಡಿಬೇಡ ಹುಟ್ಟಿಪನು ತನ್ನ ಶಿರಹರಿಯೆ ಮತ್ತೊಂದು ಹುಟ್ಟಿಸನದೇಕೆ ಸರ್ವಜ್ಞ ೯೨. ಹತ್ತು ಭವವನು ಎತ್ತಿ, ಎತ್ತು ಎಮ್ಮೆಯ ಕಾದು ಮತ್ತೆ ಪಾಂಡವರಿಗಾಳಾದ ಹರಿಯು ತಾ ನೆತ್ತಣಾ ದೈವ ಸರ್ವಜ್ಞ ೯೩. ನರಸಿಂಹನವತಾರ ಹಿರಿದಾದ ಅದ್ಭುತವು ಶರಭನು ಗುರಿಂದ ಕೊಲುವಾಗ ನರಿಯಂದವಾದ ಸರ್ವಜ್ಞ ೯೪. ಪಾಲಿಸುವ ಹರಿಯು ತಾ, ಸೋಲನೆಂದೆನಬೇಡ ಶೂಲಿ ತ ಮಗನ ತಲೆ ಚಿಗುಟಿ ಹರಿ ಏಕೆ ಪಾಲಿಸದೆ ಹೋದ ಸರ್ವಜ್ಞ ೯೫. ಹರನವನ ಕೊಲುವಂದು, ಎರಳೆಯನು ಎಸೆವಂದು ಮರಳಿ ವರಗಳನು ಕೊಡುವಂದು ಪುರಹರಗೆ ಸರಿಯಾದ ಕಾಣೆ ಸರ್ವಜ್ಞ ೯೬. ಹರಿ ಬೊಮ್ಮನೆಂಬವರು, ಹರನಿಂದಲಾದವರು ಅರಸಿಗೆ ಆಳು ಸರಿಯಹನೆ ಶಿವನಿಂದ ಮೆರೆವರಿನ್ನಾರು ಸರ್ವಜ್ಞ ೯೭. ಹರಿದಲೆಯ ಬೊಮ್ಮಂಗೆ, ಕುರಿದಲೆಯ ದಕ್ಷಂಗೆ ನೆರೆಹತ್ತು ಜನನವಾಹರಿಗೆ ಇವರುಗಳು ಸರಿಯಹರೆ ಸರ್ವಜ್ಞ ೯೮. ಧರೆಯ ತೇರನು ಮಾಡಿ, ಅಜನ ಸಾರಥಿ ಮಾಡಿ ಹರಿಯ ಶರವಮಾಡಿ ತ್ರಿಪುರವನು ಆಳಿದಂತೆ ಸರಿಯಾರು ಹೇಳಿ ಸರ್ವಜ್ಞ ೯೯. ಇಂದ್ರನಾನೆಯನೇರಿ ಒಂದನೂ ಕೊಡಲರಿಯ ಚ್ಂದ್ರಶೇಖರನು ಮುದಿಯೆತ್ತನೇರಿ ಬೇಕೆಂದುದನು ಕೊಡುವ ಸರ್ವಜ್ಞ ೧೦೦. ಉಂಬಳಿಯ ಇದ್ದವರ, ಕಂಬಳಿಯ ಹೊದೆಯುವರೆ ಶಂಭುವಿದ್ದಂತೆ ಮತ್ತೊಂದು ದೈವವನು ನಂಬುವನೆ ಹೆಡ್ಡ ಸರ್ವಜ್ಞ

ಸರ್ವಜ್ಞನ ವಚನಗಳು - 81 ರಿಂದ 90

ಸರ್ವಜ್ಞನ ವಚನಗಳು -  81 ರಿಂದ 90 ೮೧. ಎಲ್ಲ ದೈವವ ಬೇಡಿ ಹುಲ್ಲು ಬಾಯ್ತೆರೆಯದೆಲೆ ಬಲ್ಲ ದಾಶಿವನ ಭಜಿಸಿ ಬೇಡಿದಾತ ಇಲ್ಲೆನಲಿಕರಿಯ ಸರ್ವಜ್ಞ ೮೨. ಆದಿ ದೈವವನು ತಾ ಭೇದಿಸಲಿ ಕರಿಯದಲೆ ಹಾದಿಯಾಕಲ್ಲಿಗೆಡೆಮಾಡಿ ನಮಿಸುವಾ ಮಾದಿಗರ ನೋಡು ಸರ್ವಜ್ಞ ೮೩. ತನ್ನಲಿಹ ಲಿಂಗವನು ಮನ್ನಿ ಸಲಿಕರಿಯದಲೆ ಬಿನ್ನಣದಿ ಕಟಿದ ಪ್ರತಿಮೆಗಳಿಗೆರಗುವಾ ಅನ್ಯಾಯ ನೋಡು ಸರ್ವಜ್ಞ ೮೪. ಉಣಬಂದ ಜಂಗಮಕೆ ಉಣಬಡಿಸಲೊಲ್ಲದಲೆ ಉಣದಿಪ್ಪ ಲಿಂಗಕುಣಬಡಿಸಿ ಕೈಮುಗಿವ ಬಣಗುಗಳ ನೋಡ ಸರ್ವಜ್ಞ ೮೫. ಕಲ್ಲು ಕಲ್ಲೆಂಬುವಿರಿ ಕಲ್ಲೊಳಗಿರ್ಪುದೇ ದೈವ ಕಲ್ಲಲ್ಲಿ ಕಳೆಯನಿಲಿಸಿದಾ ಗುರುವಿನಾ ಸೊಲ್ಲೇದೈವ ಸರ್ವಜ್ಞ ೮೬. ಗುಡಿಯ ಬೋದಿಗೆ ಕಲ್ಲು ನಡುರಂಗ ತಾ ಕಲ್ಲು ಕಡೆಮೂಲೆ ಸೆರಗು ತಾ ಕಲ್ಲು ವರವನ್ನು ಕೊಡುವಾತ ಬೇರೆ ಸರ್ವಜ್ಞ ೮೭. ಪ್ರಾಣನೂ ಪರಮಮನು ಕಾಣದಲೆ ಒಳಗಿರಲು ಮಾಣದೇ ಸಿಲೆಯ ಹಿಡಿದದಕೆ ಮೂರ್ಖ ತಾ ಪ್ರಾಣಾತ್ಮನೆಂಬ ಸರ್ವಜ್ಞ ೮೮. ಕಲ್ಲು ಗುಂಡಿನ ಮೇಲೆ ಮಲ್ಲಿಗೆಯ ಅರಳಿಕ್ಕಿ ನಿಲ್ಲದಲೆ ಹಣೆಯ ಬಡಿವರ್ಗೆ ಬುಗುಟಿಲ್ಲ ದಿಲ್ಲ ಕಾಣಯ್ಯ ಸರ್ವಜ್ಞ ೮೯. ಉತ್ಪತ್ತಿಗೆ ಬೊಮ್ಮಗಡ ಸ್ಥಿತಿಗೆ ವಿಷ್ಣುಗಡ ಹತವ ಗೈವುದಕ್ಕೆ ರುದ್ರಗಣ, ಇವರುಗಳ ಸ್ಥಿತಿಯನರಿಯೆಂದ ಸರ್ವಜ್ಞ ೯೦. ಬೊಮ್ಮನಿರ್ಮಿಪನೆಂಬ ಮರ್ಮತಿಯ ನೀ ಕೇಳು ಬೊಮ್ಮನಾ ಸತಿಗೆ ಮೂಗಿಲ್ಲವಾಮೂಗ ನಿರ್ಮಿಸನದೇಕೆ ಸರ್ವಜ್ಞ