Skip to main content

Posts

ಅಕ್ಕನ ವಚನಗಳು - 201 ರಿಂದ 210 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೨೦೧. ಭಕ್ತೆ ಏನಪ್ಪೆನಯ್ಯ ಕರ್ತೃ-ಭೃತ್ಯತ್ವವ ನಾನರಿಯೆ ಮಾಹೇಶ್ವರಿ ಏನಪ್ಪೆನಯ್ಯ? ವ್ರತ-ನೇಮ-ಛಲವ ನಾನರಿಯೆ ಪ್ರಸಾದಿ ಏನಪ್ಪೆನಯ್ಯ? ಅರ್ಪಿತಾನರ್ಪಿತವೆಂಬ ಭೇದವ ನಾನರಿಯೆ ಪ್ರಾಣಲಿಂಗಿ ಏನಪ್ಪೆನಯ್ಯ? ಅನುಭಾವದ ಗಮನವ ನಾನರಿಯೆ ಶರಣೆ ಏನೆಪ್ಪೆನಯ್ಯ? ಶರಣಸತಿ-ಲಿಂಗಪತಿಯೆಂಬ ಭಾವವ ನಾನರಿಯೆ ಐಕ್ಯೆ ಏನೆಪ್ಪೆನಯ್ಯ? ಬೆರಸಿದ ಭೇದವ ನಾನರಿಯೆ ಚೆನ್ನಮಲ್ಲಿಕಾರ್ಜುನಯ್ಯ, ಷಟ್ಸ್ಥಲದಲ್ಲಿ ನಿಸ್ಥಲವಾಗಿಪ್ಪೆನು ೨೦೨. ಬಸವಣ್ಣ, ಎನ್ನ ಭಕ್ತಿ ನಿಮ್ಮ ಧರ್ಮ ಎನ್ನ ಜ್ಞಾನ ಪ್ರಭುದೇವರ ಧರ್ಮ ಎನ್ನ ಪರಿಣಾಮ ಚೆನ್ನಬಸವಣ್ಣನ ಧರ್ಮ ಇಂತೀ ಮೂವರೂ ಒಂದೊಂದ ಕೊಟ್ಟ ಕಾರಣ ಎನಗೆ ಮೂರು ಭಾವವಾಯಿತ್ತು ಆ ಮೂರು ಭಾವವ ನಿಮ್ಮಲ್ಲಿ ಸಮರ್ಪಿಸಿದ ಕಾರಣ ಚೆನ್ನಮಲ್ಲಿಕಾರ್ಜುನಯ್ಯನ ನೆನಹಾದಲ್ಲಿ ನಿಮ್ಮ ಕರುಣದ ಕಂದನು ಕಾಣಾ ಚೆನ್ನಬಸವಣ್ಣ ೨೦೩. ಸಂಗನ ಬಸವಣ್ಣನ ಪಾದವ ಕಂಡೆನಾಗಿ ಎನ್ನಂಗ ನಾಸ್ತಿಯಾಯಿತ್ತು ಚೆನ್ನಬಸವಣ್ಣನ ಪಾದವ ಕಂಡೆನಾಗಿ ಎನ್ನ ಪ್ರಾಣ ನಾಸ್ತಿಯಾಯಿತ್ತು ಪ್ರಭುವೇ ! ನಿಮ್ಮ ಶ್ರೀಚರಣಕ್ಕೆ ಶರಣೆಂದೆನಾಗಿ ಎನಗೆ ಅರಿವು ಸ್ವಯವಾಯಿತ್ತು ಚೆನ್ನಮಲ್ಲಿಕಾರ್ಜುನಯ್ಯ...

ಅಕ್ಕನ ವಚನಗಳು - 21 ರಿಂದ 30 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೨೧. ಅಲ್ಲೆಂದೊಡೆ ಉಂಟೆಂಬುದೀ ಮಾಯೇ, ಒಲ್ಲೆನೆಂದೆಡೆ ಬಿಡದೀ ಮಾಯೇ, ಎನಗಿದು ವಿಧಿಯೇ? ಚೆನ್ನಮಲ್ಲಿಕಾರ್ಜುನಯ್ಯ, ಒಪ್ಪಿ ಮರೆವೊಕ್ಕೊಡೆ ಮತ್ತುಂಟೆ ಕಾಯಯ್ಯ ಶಿವಧೋ! ೨೨. ಕಾಯ ಮೀಸಲಾಗಿ ನಿನಗರ್ಪಿತವಾಯಿತ್ತು ಕರಣ ಮೀಸಲಾಗಿ ನಿನಗರ್ಪಿತವಾಯಿತ್ತು, ಆನೊಂದರಿಯೆನಯ್ಯ ಎನ್ನ ಗತಿ ನೀನಾಗಿ, ಎನ್ನ ಮತಿ ನೀನಾಗಿ, ಪ್ರಾಣ ನಿನಗರ್ಪಿತವಾಯಿತ್ತು, ನೀನಲ್ಲದೆ ಪೆರತೊಂದ ನೆನೆದರೆ ಆಣೆ ನಿಮ್ಮಾಣೆ ಚೆನ್ನಮಲ್ಲಿಕಾರ್ಜುನ ೨೩. ಹಿಂದಣ ಹಳ್ಳ, ಮುಂದಣ ತೊರೆ, ಸಲ್ಲುವ ಪರಿಯೆಂತು ಹೇಳಾ! ಹಿಂದಣ ಕೆರೆ, ಮುಂದಣ ಬಲೆ ಹದುಳವಿನ್ನೆಲ್ಲಿಯದು ಹೇಳಾ ನೀನಿಕ್ಕಿದ ಮಾಯೆ ಕೊಲುತಿಪ್ಪುದು ಕಾಯಯ್ಯ ಕಾಯಯ್ಯ ಚೆನ್ನಮಲ್ಲಿಕಾರ್ಜುನ ೨೪. ಭವಭವದಲಿ ತೊಳಲಿ ಬಳಲಿತ್ತೆನ್ನ ಮನ ಆನೇವೆನಯ್ಯ, ಹಸಿದುಂಡೊಡೆ, ಉಂಡು ಹಸಿವಾಯಿತ್ತು ಇಂದು ನೀನೊಲಿದೆಯಾಗಿ ಎನಗೆ ಅಮೃತದ ಆಪ್ಯಾಯನವಾಯಿತ್ತು ಇದು ಕಾರಣ ನೀನಿಕ್ಕಿದ ಮಾಯೆಯನಿನ್ನು ಮೆಟ್ಟಿದೆನಾದೊಡೆ ಆಣೆ ನಿಮ್ಮಾಣೆ ಚೆನ್ನಮಲ್ಲಿಕಾರ್ಜುನ ೨೫. ಹರಿಯ ನುಂಗಿತ್ತು ಮಾಯೆ! ಅಜನ ನುಂಗಿತ್ತು ಮಾಯೆ! ಇಂದ್ರನ ನುಂಗಿತ್ತು ಮಾಯೆ! ಚಂದ್ರನ ನುಂಗಿತ್ತು ಮಾಯ...

ಅಕ್ಕನ ವಚನಗಳು - 11 ರಿಂದ 20 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೧೧. ನೀರಕ್ಷೀರದಂತೆ ನೀನಿಪ್ಪೆಯಾಗಿ ಆವುದು ಮುಂದು, ಆವುದು ಹಿಂದು ಎಂದರಿಯೆನು ಆವುದು ಕರ್ತೃ, ಆವುದು ಭೃತ್ಯನೆಂದರಿಯೆನು ಆವುದು ಘನ, ಆವುದು ಕಿರಿದೆಂದರಿಯೆನು ಚೆನ್ನಮಲ್ಲಿಕಾರ್ಜುನಯ್ಯ, ನಿನ್ನನೊಲಿದು ಕೊಂಡಾಡಿದರೆ ಇರುಹೆ ರುದ್ರನಾಗದೆ ಹೇಳಯ್ಯ ೧೨. ಎನ್ನ ಕಾಯ ಮಣ್ಣು, ಜೀವ ಬಯಲು ಆವುದ ಹಿಡಿವೆನಯ್ಯ ದೇವ? ನಿಮ್ಮನಾವ ಪರಿಯಲ್ಲಿ ನೆನೆವೆನಯ್ಯ? ಎನ್ನ ಮಾಯವನು ಮಾಣಿಸಯ್ಯ ಚೆನ್ನಮಲ್ಲಿಕಾರ್ಜುನಯ್ಯ ೧೩. ಆವಾಗಳೂ ನನ್ನ ಮನ ಉದರಕ್ಕೆ ಹರಿವುದು ಕಾಣಲಾರೆನಯ್ಯ ನಿಮ್ಮುವನು ಭೇದಿಸಲಾರೆನಯ್ಯ ನಿಮ್ಮ ಮಾಯೆಯನು ಮಾಯದ ಸಂಸಾರದಲ್ಲಿ ಸಿಲುಕಿದೆನು ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಹೊದ್ದುವಂತೆ ಮಾಡಾ ನಿಮ್ಮ ಧರ್ಮ ೧೪. ಕಲ್ಲ ಹೊಕ್ಕರೆ ಕಲ್ಲ ಬಿರಿಸಿದೆ ಗಿರಿಯ ಹೊಕ್ಕರೆ ಗಿರಿಯ ಬಿರಿಸಿದೆ ಭಾಪು ಸಂಸಾರವೇ, ಬೆನ್ನಿಂದ ಬೆನ್ನ ಹತ್ತಿ ಬಂದೆ ಚೆನ್ನಮಲ್ಲಿಕಾರ್ಜುನಯ್ಯ, ಇನ್ನೇವೆನಿನ್ನೇವೆ!? ೧೫. ಸಂಸಾರವೆಂಬ ಹಗೆಯಯ್ಯ, ತಂದೆ, ಎನ್ನ ವಂಶವಂಶ ತಪ್ಪದೆ ಅರಸಿಕೊಂಡು ಬರುತ್ತಿದೆಯಯ್ಯ ಎನ್ನುವನರಸಿಯರಸಿ ಹಿಡಿದು ಕೊಲ್ಲುತ್ತಿದೆಯಯ್ಯ ನಿಮ್ಮ ಮರೆವೊಕ್ಕೆ ಕ...

ಅಕ್ಕನ ವಚನಗಳು - 1 ರಿಂದ 10 ರವರೆಗೆ

೧. ಅಘಟಿತ-ಘಟಿತನ ಒಲವಿನ ಶಿಶು ಕಟ್ಟಿದೆನು ಜಗಕ್ಕೆ ಬಿರುದನು ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಂಗಳಿಗೆ ಇಕ್ಕಿದೆನು ಕಾಲಲ್ಲಿ ತೊಡರನು ಗುರುಕೃಪೆಯೆಂಬ ತಿಗುರನಿಕ್ಕಿ ಮಹಾಶರಣೆಂಬ ತಿಲಕವನಿಕ್ಕಿ ಶಿವಶರಣೆಂಬ ಅಲಗ ಕೊಂಡು ನಿನ್ನ ಕೊಲುವೆ ಗೆಲುವೆ! ಬಿಡು ಬಿಡು ಕರ್ಮವೇ, ನಿನ್ನ ಕೊಲ್ಲದೇ ಮಾಣೆನು!! ಕಡೆಹಿಸಿಕೊಳ್ಪದೆನ್ನ ನುಡಿಯ ಕೇಳಾ- ಕೆಡದ ಶಿವಶರಣೆಂಬ ಅಲಗನೆ ಕೊಂಡು ನಿನ್ನ ಕೊಲುವೆ ಗೆಲುವೆ ನಾನು! ಬ್ರಹ್ಮಪಾಶವೆಂಬ ಕಳನನೆ ಸವರಿ ವಿಷ್ಣುಮಾಯೆಯೆಂಬ ಎಡಗೋಲ ನೂಕಿ ಎನ್ನೊಡೆಯ ಚೆನ್ನಮಲ್ಲಿಕಾರ್ಜುನಯ್ಯ ತಲೆದೂಗಲಿಕಾಡುವೆ ನಾನು. ೨. ನೆಲದ ಮರೆಯ ನಿಧಾನದಂತೆ ಫಲದ ಮರೆಯ ರುಚಿಯಂತೆ ಶಿಲೆಯ ಮರೆಯ ಹೇಮದಂತೆ ತಿಲದ ಮರೆಯ ತೈಲದಂತೆ ಮರದ ಮರೆಯ ತೇಜಿದಂತೆ ಭಾವದ ಮರೆಯ ಬ್ರಹ್ಮನಾಗಿಪ್ಪ ಚೆನ್ನಮಲ್ಲಿಕಾರ್ಜುನನ ನಿಲವನಾರೂ ಅರಿಯಬಾರದು! ೩. ಈಳೆ-ನಿಂಬೆ-ಮಾವು-ಮಾದಲಕ್ಕೆ ಹುಳಿನೀರೆರೆದವರಾರಯ್ಯ? ಕಬ್ಬು-ಬಾಳೆ-ನಾರಿವಾಳಕ್ಕೆ ಸಿಹಿನೀರೆರೆದವರಾರಯ್ಯ? ಕಳವೆ-ಶಾಲಿಗೆ ಓಗರದ ಉದಕವನೆರೆದವರಾರಯ್ಯ? ಮರುಗ-ಮಲ್ಲಿಗೆ-ಪಚ್ಚೆ-ಮುಡಿವಾಳಕ್ಕೆ ಪರಿಮಳದುದಕವನೆರೆದವರಾರಯ್ಯ? ಇಂತೀ ಜಲ ಒಂದೆ, ನೆಲ ಒಂದೆ, ಆಕಾಶ ಒಂದೆ! ಒಂದೇ ಜಲವು ಹಲವು ದ್ರವ್ಯಂಗಳ ಕೂಡಿ ತನ್ನ ಪರಿ ಬೇರಾಗಿಹ ಹಾಂಗೆ ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನು ಹಲವು ಜಗಂಗಳ ಕೂಡಿಕೊಂಡಿದ್ದರೇನು? ತನ್ನ ಪರಿ ಬೇರೆ! ೪. ತನ್ನ ವಿನೋದಕ್ಕೆ ತಾನೇ ಸೃಜಿಸಿದ ಜಗತ್ತ!...

ಬಸವಣ್ಣನ ವಚನಗಳು - 491 ರಿಂದ 500 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೪೯೧. ಅರತುದಯ್ಯ ಅಂಗಗುಣ, ಒರೆತುದಯ್ಯ ಭಕ್ತಿರಸ! ಆವರಿಸಿತಯ್ಯ ಅಂಗ ಲಿಂಗವನು! ಏನೆಂದರಿಯೆನಯ್ಯ ಲೋಕ-ಲೌಕಿಕದ ಮದವ, ಕೂಡಲಸಂಗಮದೇವ, ನಿಮ್ಮ ಕರುಣವೆನ್ನನೆಡೆಗೊಂಡಿತ್ತಾಗಿ! ೪೯೨. ಪೂಜೆಯುಳ್ಳನ್ನಬರ ಲಿಂಗವ ಹಾಡಿದೆ! ಮಾಟವುಳ್ಳನ್ನಬರ ಜಂಗಮವ ಹಾಡಿದೆ! ಜಿಹ್ವೆಯುಳ್ಳನ್ನಬರ ಪ್ರಸಾದವ ಹಾಡಿದೆ! ಈ ತ್ರಿವಿಧ ನಾಸ್ತಿಯಾದ ಬಳಿಕ ಎನ್ನ ನಾ ಹಾಡಿಕೊಂಡೆ ಕಾಣಾ ಕೂಡಲಸಂಗಮದೇವ. ೪೯೩. ಮರಳು ತಲೆ, ಹುರುಳು ತಲೆ ನೀನೇ ದೇವ ಹೆಂಗೂಸು ಗಂಡುಗೂಸೂ ನೀನೇ ದೇವ ಎಮ್ಮಕ್ಕನ ಗಂಡ ನೀನೇ ದೇವ, ಕೂಡಲಸಂಗಮದೇವ, ಭ್ರಾಂತಳಿದು ಭಾವ ನಿಂದುದಾಗಿ. ೪೯೪. ಉಮಾದಿನಾಥರು ಕೋಟಿ, ಪಂಚವಕ್ತ್ರರು ಕೋಟಿ, ನಂದಿವಾಹನರೊಂದು ಕೋಟಿ ನೋಡಯ್ಯ! ಸದಾಶಿವರೊಂದು ಕೋಟಿ ಗಂಗೆವಾಳುಕಸಮಾರುದ್ರರು ಇವರೆಲ್ಲರು ಕೂಡಲಸಂಗನ ಸಾನ್ನಿಧ್ಯರಲ್ಲದೆ ಸಮರಸವೇದ್ಯರೊಬ್ಬರೂ ಇಲ್ಲ! ೪೯೫. ಬಯಲ ರೂಪಮಾಡಬಲ್ಲಾತನೇ ಶರಣನು, ಆ ರೂಪ ಬಯಲಮಾಡಬಲ್ಲಾತನೇ ಲಿಂಗಾನುಭಾವಿ. ಬಯಲ ರೂಪಮಾಡಲರಿಯದಿದ್ದರೆ ಎಂತು ಶರಣನೆಂಬೆ ? ಆ ರೂಪ ಬಯಲ ಮಾಡಲರಿಯದಿದ್ದರೆ ಎಂತು ಲಿಂಗಾನುಭಾವಿಯೆಂಬೆ ? ಈ ಉಭಯವೊಂದಾದರೆ ನಿಮ್ಮಲ್ಲಿ...

ಬಸವಣ್ಣನ ವಚನಗಳು - 481 ರಿಂದ 490 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೪೮೧. ದಿಟ ಮಾಡಿ ಪೂಜಿಸಿದರೆ ಸಟೆ ಮಾಡಿ ಕಳೆವೆ. ಸಟೆ ಮಾಡಿ ಪೂಜಿಸಿದರೆ ದಿಟ ಮಾಡಿ ಕಳೆವೆ. ಏನೆಂಬೆನೆಂತೆಂಬೆ! ಸುಖಕ್ಕೆ ತುಂಬಿದ ದೀವಿಗೆ ಮನೆಯೆಲ್ಲವ ಸುಟ್ಟಂತೆ ಆನು ಮಾಡಿದ ಭಕ್ತಿ ಎನಗಿಂತಾಯಿತ್ತು ಕೂಡಲಸಂಗಮದೇವ. ೪೮೨. ಎಂಬತ್ತೆಂಟು ಪವಾಡವ ಮೆರೆದು ಹಗರಣದ ಚೋಹದಂತಾಯಿತ್ತೆನ್ನ ಭಕ್ತಿ; ತನುವಿನೊಳಗೆ ಮನ ಸಿಲುಕದೆ, ಮನದೊಳಗೆ ತನು ಸಿಲುಕದೆ ತನು ಅಲ್ಲಮನಲ್ಲಿ ಸಿಲುಕಿತ್ತು! ಮನ ಚೆನ್ನಬಸವಣ್ಣನಲ್ಲಿ ಸಿಲುಕಿತ್ತು ನಾನೇತರಲ್ಲಿ ನೆನೆವೆನಯ್ಯ ಕೂಡಲಸಂಗಮದೇವ ? ! ೪೮೩. ಬಸವ ಬಾರಯ್ಯ, ಮರ್ತ್ಯಲೋಕದೊಳಗೆ ಭಕ್ತರುಂಟೆ ಹೇಳಯ್ಯ ? ಮತ್ತಾರು ಇಲ್ಲಯ್ಯ, ಮತ್ತಾರು ಇಲ್ಲಯ್ಯ ! ನಾನೊಬ್ಬನೇ ಭಕ್ತನು, ಮರ್ತ್ಯಲೋಕದೊಳಗಣ ಭಕ್ತರೆಲ್ಲರೂ ಜಂಗಮಲಿಂಗ ನೀನೇ ಅಯ್ಯ ಕೂಡಲಸಂಗಮದೇವ!! ೪೮೪. ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗ, ಶರಣನೈಕ್ಯನು ಮೆಲ್ಲಮೆಲ್ಲನೆ ಆದೆನೆಂಬನ್ನಬರ, ನಾನು ವಜ್ರದೇಹಿಯೆ ? ನಾನೇನು ಅಮೃತವ ಸೇವಿಸಿದೆನೆ ? ನಾನು ಮರುಜೇವಣಿಯ ಕೊಂಡೆನೆ ? ನುಡಿದ ನುಡಿಯೊಳಗೆ ಷಡುಸ್ಥಲ ಬಂದು ನನ್ನ ಮನವನಿಂಬುಗೊಳದಿದ್ದರೆ ಸುಡುವೆನೀ ತನುವ ಕೂಡಲಸಂಗ...

ಬಸವಣ್ಣನ ವಚನಗಳು - 471 ರಿಂದ 480 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೪೭೧. ಲಗ್ನವೆಲ್ಲಿಯದೋ ವಿಘ್ನವೆಲ್ಲಿಯದೋ ಸಂಗಯ್ಯ ? ದೋಷವೆಲ್ಲಿಯದೋ ದುರಿತವೆಲ್ಲಿಯದೋ ಸಂಗಯ್ಯ ? ನಿಮ್ಮ ಮಾಣದೆ ನೆನೆವಂಗೆ ಭವಕರ್ಮವೆಲ್ಲಿಯದೋ ಕೂಡಲಸಂಗಯ್ಯ! ೪೭೨. ಶರಣ ನಿದ್ರೆಗೈದರೆ ಜಪ ಕಾಣಿರೋ! ಶರಣನೆದ್ದು ಕುಳಿತರೆ ಶಿವರಾತ್ರಿ ಕಾಣಿರೋ! ಶರಣ ನಡೆದುದೇ ಪಾವನ ಕಾಣಿರೋ! ಶರಣ ನುಡಿದುದೇ ಶಿವತತ್ವಕಾಣಿರೋ ಕೂಡಲಸಂಗನ ಶರಣನ ಕಾಯವೇ ಕೈಲಾಸ ಕಾಣಿರೋ! ೪೭೩. ಸಮುದ್ರ ಘನವೆಂಬೆನೆ ? ಧರೆಯ ಮೇಲಡಗಿತ್ತು! ಧರೆ ಘನವೆಂಬೆನೆ ? ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು! ನಾಗೇಂದ್ರ ಘನವೆಂಬೆನೆ ? ಪಾರ್ವತಿಯ ಕಿರುಗುಣಿಕೆಯ ಮುದ್ರಿಕೆಯಾಯಿತ್ತು! ಅಂಥ ಪಾರ್ವತಿ ಘನವೆಂಬೆನೆ ? ಪರಮೇಶ್ವರನ ಅರ್ಧಾಂಗಿಯಾದಳು! ಅಂಥ ಪರಮೇಶ್ವರ ಘನವೆಂಬೆನೆ ? ನಮ್ಮ ಕೂಡಲಸಂಗನ ಶರಣರ ಮನದ ಕೊನೆಯ ಮೊನೆಯ ಮೇಲಡಗಿದನು! ೪೭೪. ನೆಲನೊಂದೇ ಹೊಲೆಗೇರಿ, ಶಿವಾಲಯಕ್ಕೆ! ಜಲವೊಂದೇ ಶೌಚಾಚಮನಕ್ಕೆ! ಕುಲವೊಂದೇ ತನ್ನ ತಾನರಿದವಂಗೆ! ಫಲವೊಂದೇ ಷಡುದರ್ಶನ ಮುಕ್ತಿಗೆ! ನಿಲವೊಂದೇ, ಕೂಡಲಸಂಗಮದೇವ, ನಿಮ್ಮನರಿದವಂಗೆ. ೪೭೫. ಅಯ್ಯಾ, ಸಜ್ಜನ ಸದ್ಭಕ್ತರ ಸಂಗದಿಂದ ಮಹಾನುಭಾವರ ಕಾಣಬಹುದು! ಮ...