Skip to main content

Posts

Showing posts from July 2, 2010

ಬಸವಣ್ಣನ ವಚನಗಳು - 1 ರಿಂದ 10 ರವರೆಗೆ

ಬಸವಣ್ಣನ ವಚನಗಳು - 1 ರಿಂದ 10 ರವರೆಗೆ ೧. ಉದಕದೊಳಗೆ ಬೈಚಿಟ್ಟ ಬೈಕೆಯ ಕಿಚ್ಚಿನಂತೆ ಇದ್ದಿತ್ತು; ಸಸಿಯೊಳಗಣ ರಸದ ರುಚಿಯಂತೆ ಇದ್ದಿತ್ತು; ನನೆಯೊಳಗಣ ಪರಿಮಳದಂತೆ ಇದ್ದಿತ್ತು; ಕೂಡಲಸಂಗಮದೇವರ ನಿಲವು ಕನ್ನೆಯ ಸ್ನೇಹದಂತೆ ಇದ್ದಿತ್ತು. ೨. ಕಾಳಿಯ ಕಂಕಾಳದಿಂದ ಮುನ್ನ ತ್ರಿಪುರ ಸಂಹಾರದಿಂದ ಮುನ್ನ ಹರಿವಿರಿಂಚಿಗಳಿಂದ ಮುನ್ನ ಉಮೆಯ ಕಲ್ಯಾಣದಿಂದ ಮುನ್ನ ಮುನ್ನ, ಮುನ್ನ, ಮುನ್ನ, ಅಂದಂದಿಗೆ ಎಳೆಯ ನೀನು, ಹಳೆಯ ನಾನು ಮಹಾದಾನಿ ಕೂಡಲಸಂಗಮದೇವ. ೩. ಅಯ್ಯಾ, ನೀನು ನಿರಾಕಾರವಾದಲ್ಲಿ ನಾನು ಜ್ಞಾನವೆಂಬ ವಾಹನವಾಗಿದ್ದೆ ಕಾಣಾ. ಅಯ್ಯಾ, ನೀನು ನಾಂಟ್ಯಕ್ಕೆ ನಿಂದಲ್ಲಿ ನಾನು ಚೈತನ್ಯವೆಂಬ ವಾಹನವಾಗಿದ್ದೆ ಕಾಣಾ. ಅಯ್ಯಾ, ನೀನು ಸಾಕಾರವಾಗಿದ್ದಲ್ಲಿ ನಾನು ವೃಷಭನೆಂಬ ವಾಹನವಾಗಿದ್ದೆ ಕಾಣಾ. ಅಯ್ಯಾ, ನೀನೆನ್ನ ಭವವ ಕೊಂದಹೆನೆಂದು ಜಂಗಮಲಾಂಛನವಾಗಿ ಬಂದಲ್ಲಿ ನಾನು ಭಕ್ತನೆಂಬ ವಾಹನವಾಗಿದ್ದೆ ಕಾಣಾ ಕೂಡಲಸಂಗಮದೇವ. ೪. ಕರಿ ಘನ, ಅಂಕುಶ ಕಿರಿದೆನ್ನಬಹುದೆ ? ಬಾರದಯ್ಯ! ಗಿರಿ ಘನ, ವಜ್ರ ಕಿರಿದೆನ್ನಬಹುದೆ ? ಬಾರದಯ್ಯ! ತಮಂಧ ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ? ಬಾರದಯ್ಯ! ಮರಹು ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ? ಬಾರದಯ್ಯ! ಕೂಡಲಸಂಗಮದೇವ. ೫. ಸಂಸಾರಸಾಗರದ ತೆರೆ ಕೊಬ್ಬಿ ಮುಖದ ಮೇಲೆ ಅಲೆವುತ್ತಿದೆ ನೋಡಾ! ಸಂಸಾರಸಾಗರ ಉರದುದ್ದವೇ ಹೇಳಾ ? ಸಂಸಾರಸಾಗರ ಕೊರಲುದ್ದವೇ ಹೇಳಾ
ವಚನಗಳು ನನ್ನ ಬ್ಲಾಗ್ನಲ್ಲಿ ಸದ್ಯಕ್ಕೆ ಬಸವಣ್ಣ ಅಕ್ಕಮಹಾದೇವಿ ಅಲ್ಲಮಪ್ರಭು ಸರ್ವಜ್ಞ ಇವರುಗಳು ಸುಮಾರು 1200+ ವಚನಗಳು ಲಭ್ಯವಿವೆ. ಬಸವಣ್ಣ, ಅಕ್ಕಮಹಾದೇವಿ, ಮತ್ತು ಅಲ್ಲಮಪ್ರಭುಗಳ ವಚನಗಳನ್ನು "ಪಂಪ ಪ್ರಶಸ್ತಿ" ಪುರಸ್ಕೃತ ಡಾ. ಎಲ್. ಬಸವರಾಜುರವರು ಸಂಪಾದಿಸಿರುವ "ಬಸವಣ್ಣನವರ ವಚನಗಳು", "ಅಕ್ಕನ ವಚನಗಳು", ಮತ್ತು "ಅಲ್ಲಮನ ವಚನಗಳು" ಪುಸ್ತಕದ ಆಧಾರ ಮತ್ತು ಅನುಕ್ರಮದಲ್ಲಿ ಕೊಡಲಾಗಿದೆ. ಪ್ರಕಟಣೆಗೆ ಸಂತೋಷದಿಂದ ಒಪ್ಪಿಗೆಯಿತ್ತ ಡಾ. ಎಲ್. ಬಸವರಾಜುರವರಿಗೆ ವಿಚಾರಮಂಟಪ ಹೃತ್ಪೂರ್ವಕ ಧನ್ಯವಾದಗಳನ್ನರ್ಪಿಸುತ್ತದೆ. ವಿ.ಸೂ.: ಇಲ್ಲಿನ ಹಲವಾರು ವಚನಗಳಲ್ಲಿ, ವಿಶೇಷವಾಗಿ ಅಲ್ಲಮನ ವಚನಗಳಲ್ಲಿ ಹಳಗನ್ನಡದ 'ರ' ಅಕ್ಷರವನ್ನು ಬಳಸಲಾಗಿದೆ. ಹಳೆಗನ್ನಡದ `ಱ'ವನ್ನು 'ರ' ಎಂದು ಓದಿಕೊಳ್ಳುವುದು. ವಿ.ಸೂ.:ಪ್ರಿಯ ಗೆಳೆಯರೇ ನನ್ನ ಬ್ಲಾಗ್ ಸೇರಿಕೊಂಡು ನನ್ನು ಹೆಚ್ಹು ಹೆಚ್ಹು ವಚನ ನೀಡಲು ಸಹಕರಿಸಿ ನಿಮ್ಮ ನಾಗ