Skip to main content

Posts

Showing posts from November 24, 2010

ಸರ್ವಜ್ಞನ ವಚನಗಳು - 41 ರಿಂದ 50

ಸರ್ವಜ್ಞನ ವಚನಗಳು -  41 ರಿಂದ 50 ೪೧. ದೇಹಿಯನಬೇಡ, ನಿರ್ದೇಹಿ ಜಂಗಮಲಿಂಗ ದೇಹ ಗುಣದಾಸೆಯಳಿದೊಡೆ ಆತ ನೀರ್ದೇಹಿ ಕಾಣಯ್ಯ ಸರ್ವಜ್ಞ ೪೨. ವಂಶವನು ಪುಗನೆಂದಿ, ಗಾಶಿಸನು ಪರಧನವ ಸಂಶಯವನಳಿದ ನಿಜಸುಖಿ ಮಹಾತ್ಮನು ಹಿಂಸೆಗೊಡಬಡನು ಸರ್ವಜ್ಞ ೪೩. ಅರ್ಪಿತದ ಭೇದವನು ತಪ್ಪದೆಲೆ ತಿಳಿದಾತ ಸರ್ಪಭುಷಣನ ಸಮನಹನು ನಿಜಸುಖದೋ ಳೊಪ್ಪುತ್ತಲಿಹನು ಸರ್ವಜ್ಞ ೪೪. ಭೋಗಿಸುವ ವಸ್ತುಗಳ ಭೋಗಿಸು ಶಿವಗಿತ್ತು ರಾಗದಿಂ ಸತ್ಯವೆರಸಿಹ ಪ್ರಸಾದಿಯ ಶ್ರಿ ಗುರುವು ಎಂಬೆ ಸರ್ವಜ್ಞ ೪೫. ಲಿಂಗವಿರಹಿತನಾಗಿ ನುಂಗದಿರು ಏನುವನು ತಿಂಗಳಲಿ ಸತ್ತ ಕೊಳೆ ನಾಯಿ ಮಾಂಸವನು ನುಂಗಿದೆಂತಕ್ಕು ಸರ್ವಜ್ಞ ೪೬. ಅಂಜದಲೆ ಕೊಂಡಿಹರೆ, ನಂಜು ಅಮೃತವದಕ್ಕು ಅಂಜಿ, ಅಳುಕುತಲಿ ಕೊಂಡಿಹರೆ ಅಮೃತವು ನಂಜಿನಂತಕ್ಕು ಸರ್ವಜ್ಞ ೪೭. ಸಿರಿಯು ಬಂದರೆ ಲೇಸು, ತೀರದ ಜವ್ವನ ಲೇಸು ಮರಣವಿಲ್ಲದಾ ಮಗಲೇಸು ಲಿಂಗಕ್ಕೆ ಶರಣುವೆ ಲೇಸು ಸರ್ವಜ್ಞ ೪೮. ಸೋಕಿಡಾ ಸುಖಂಗಳ ನೇಕವನು ಶಿವಗಿತ್ತು ತಾ ಕಿಂಕರತೆಯ ಕೈಕೊಂಡ ಮನುಜನೇ ಲೋಕಕ್ಕೆ ಶರಣ ಸರ್ವಜ್ಞ ೪೯. ಮಲಯಜದ ಮರದೊಳಗೆ ಸಲೆ ಗಂಧವಿಪ್ಪಂತೆ ಸುಲಲಿತವು ಆದ ಶರಣರಾಹೃದಯದಲಿ ನೆಲಸಿಹನು ಶಿವನು ಸರ್ವಜ್ಞ ೫೦. ಕಿಚ್ಚಿನೊಳು ಸುಘೃತವು, ಒಚ್ಚತದಿ ಕರ್ಪುರವು ಅಚ್ಚಳಿದು ನಿಜದಿ ನಿಂದಂತೆ, ಭೇದವನು ಮುಚ್ಚುವನೆ ಶರಣ ಸರ್ವಜ್ಞ