Skip to main content

Posts

Showing posts from November 30, 2010

ಸರ್ವಜ್ಞನ ವಚನಗಳು - 101 ರಿಂದ 110

೧೦೧. ಎಲುವಿನ ಕಾಯಕ್ಕೆ | ಸಲೆ ಚರ್ಮವನು ಹೊದಿಸಿ ಮಲ-ಮೂತ್ರ-ಕ್ರಿಮಿಯು ಒಳಗಿರ್ಪ - ದೇಹಕ್ಕೆ ಕುಲವಾವುದಯ್ಯ ಸರ್ವಜ್ಞ ೧೦೨. ಹೊಲಸು ಮಾಂಸದ ಹುತ್ತು | ಎಲುವಿನ ಹಂಜರವು ಹೊಲೆ ಬಲಿದ ತನುವಿನೊಳಗಿರ್ದು - ಮತ್ತದರ ಕುಲವನೆಣಿಸುವರೆ ಸರ್ವಜ್ಞ ೧೦೩. ದಿಟವೆ ಪುಣ್ಯದ ಪುಂಜ | ಸಟೆಯೆ ಪಾಪದ ಬೀಜ ಕುಟಿಲ ವಂಚನೆಯ ಪೊಗದಿರು - ನಿಜವ ಪಿಡಿ ಘಟವ ನೆಚ್ಚದಿರು ಸರ್ವಜ್ಞ ೧೦೪. ಸುರತರು ಮರನಲ್ಲ | ಸುರಭಿಯೊಂದಾವಲ್ಲ ಪರುಷ ಪಾಷಾಣದೊಳಗಲ್ಲ - ಗುರುವು ತಾ ನರರೊಳಗಲ್ಲ ಸರ್ವಜ್ಞ ೧೦೫. ಜ್ಯೋತಿಯಿಂದವೆ ನೇತ್ರ | ರಾತ್ರಿಯಲಿ ಕಾಂಬಂತೆ ಸೂತ್ರದಲಿ ಧಾತನರಿವಂತೆ - ಶಿವನ ಗುರು ನಾಥನಿಂದರಿಗು ಸರ್ವಜ್ಞ ೧೦೬. ಮಂಡೆ ಬೋಳಾದೊಡಂ | ದಂಡು ಕೋಲ್ವಿಡಿದೊಡಂ ಹೆಂಡತಿಯ ಬಿಟ್ಟು ನಡೆದೊಡಂ - ಗುರುಮುಖವ ಕಂಡಲ್ಲದಿಲ್ಲ ಸರ್ವಜ್ಞ ೧೦೭. ಬ್ರಹ್ಮವೆಂಬುದು ತಾನು | ಒಮ್ಮಾರು ನೀಳವೇ ಒಮ್ಮೆ ಸದ್ಗುರುವಿನುಪದೇಶ - ವಾಲಿಸಲು ಗಮ್ಮನೆ ಮುಕ್ತಿ ಸರ್ವಜ್ಞ ೧೦೮. ಊರಿಂಗೆ ದಾರಿಯ | ನಾರು ತೋರಿದರೇನು ಸಾರಾಯಮಪ್ಪ ಮತವನರುಹಿಸುವ ಗುರು ಆರಾದೊಡೇನು ಸರ್ವಜ್ಞ ೧೦೯. ತುಪ್ಪವಾದಾ ಬಳಿಕ | ಹೆಪ್ಪನೆರೆದವರುಂಟೆ ನಿಃಪತ್ತಿಯಾದ ಗುರುವಿನುಪದೇಶದಿಂ ತಪ್ಪದೇ ಮುಕ್ತಿ ಸರ್ವಜ್ಞ ೧೧೦. ಪರುಷ ಲೋಹವ ಮುಟ್ಟಿ | ವರುಷವಿರಬಲ್ಲುದೇ ಪರುಷವೆಂತಂತೆ ಶಿಷ್ಯಂಗೆ