Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments. ೨೧. ಅಲ್ಲೆಂದೊಡೆ ಉಂಟೆಂಬುದೀ ಮಾಯೇ, ಒಲ್ಲೆನೆಂದೆಡೆ ಬಿಡದೀ ಮಾಯೇ, ಎನಗಿದು ವಿಧಿಯೇ? ಚೆನ್ನಮಲ್ಲಿಕಾರ್ಜುನಯ್ಯ, ಒಪ್ಪಿ ಮರೆವೊಕ್ಕೊಡೆ ಮತ್ತುಂಟೆ ಕಾಯಯ್ಯ ಶಿವಧೋ! ೨೨. ಕಾಯ ಮೀಸಲಾಗಿ ನಿನಗರ್ಪಿತವಾಯಿತ್ತು ಕರಣ ಮೀಸಲಾಗಿ ನಿನಗರ್ಪಿತವಾಯಿತ್ತು, ಆನೊಂದರಿಯೆನಯ್ಯ ಎನ್ನ ಗತಿ ನೀನಾಗಿ, ಎನ್ನ ಮತಿ ನೀನಾಗಿ, ಪ್ರಾಣ ನಿನಗರ್ಪಿತವಾಯಿತ್ತು, ನೀನಲ್ಲದೆ ಪೆರತೊಂದ ನೆನೆದರೆ ಆಣೆ ನಿಮ್ಮಾಣೆ ಚೆನ್ನಮಲ್ಲಿಕಾರ್ಜುನ ೨೩. ಹಿಂದಣ ಹಳ್ಳ, ಮುಂದಣ ತೊರೆ, ಸಲ್ಲುವ ಪರಿಯೆಂತು ಹೇಳಾ! ಹಿಂದಣ ಕೆರೆ, ಮುಂದಣ ಬಲೆ ಹದುಳವಿನ್ನೆಲ್ಲಿಯದು ಹೇಳಾ ನೀನಿಕ್ಕಿದ ಮಾಯೆ ಕೊಲುತಿಪ್ಪುದು ಕಾಯಯ್ಯ ಕಾಯಯ್ಯ ಚೆನ್ನಮಲ್ಲಿಕಾರ್ಜುನ ೨೪. ಭವಭವದಲಿ ತೊಳಲಿ ಬಳಲಿತ್ತೆನ್ನ ಮನ ಆನೇವೆನಯ್ಯ, ಹಸಿದುಂಡೊಡೆ, ಉಂಡು ಹಸಿವಾಯಿತ್ತು ಇಂದು ನೀನೊಲಿದೆಯಾಗಿ ಎನಗೆ ಅಮೃತದ ಆಪ್ಯಾಯನವಾಯಿತ್ತು ಇದು ಕಾರಣ ನೀನಿಕ್ಕಿದ ಮಾಯೆಯನಿನ್ನು ಮೆಟ್ಟಿದೆನಾದೊಡೆ ಆಣೆ ನಿಮ್ಮಾಣೆ ಚೆನ್ನಮಲ್ಲಿಕಾರ್ಜುನ ೨೫. ಹರಿಯ ನುಂಗಿತ್ತು ಮಾಯೆ! ಅಜನ ನುಂಗಿತ್ತು ಮಾಯೆ! ಇಂದ್ರನ ನುಂಗಿತ್ತು ಮಾಯೆ! ಚಂದ್ರನ ನುಂಗಿತ್ತು ಮಾಯ...
ಬಸವಣ್ಣ,ಅಕ್ಕಮಹಾದೇವಿ,ಅಲ್ಲಮಪ್ರಭು ಮತೂ ಸರ್ವಜ್ಞರ ವಚನಗಳು