Skip to main content

Posts

Showing posts from January 22, 2011

ಬಸವಣ್ಣನ ವಚನಗಳು - 251 ರಿಂದ 260 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೨೫೧. ಆರಾಧನೆಯ ಮಾಡಿದರೆ ಅಮೃತದ ಬೆಳಸು. ವಿರೋಧಿಸಿದರೆ ವಿಷದ ಬೆಳಸು. ಇದು ಕಾರಣ, ಲಿಂಗ ಜಂಗಮಕ್ಕಂಜಲೇಬೇಕು. ಸ್ಥಾವರ-ಜಂಗಮ ಒಂದೆಂದರಿದರೆ ಕೂಡಲಸಂಗಮದೇವ ಶರಣಾಸನ್ನಿಹಿತನು. ೨೫೨. ಜಂಗಮ ನಿಂದೆಯ ಮಾಡಿ, ಲಿಂಗವ ಪೂಜಿಸುವ ಭಕ್ತನ ಅಂಘವಣೆ ಎಂತೋ ? ಶಿವಶಿವ, ನಿಂದಿಸುವ ಪೂಜಿಸುವ ಪಾತಕವಿದ ಕೇಳಲಾಗದು! "ಗುರುವಿನ ಗುರು ಜಂಗಮ" ಇಂತೆಂದುದು ಕೂಡಲಸಂಗನ ವಚನ. ೨೫೩. ಅರಸರ ಕಂಡು ತನ್ನ ಪುರುಷನ ಮರೆತರೆ ಮರನೇರಿ ಕಯ್ಯ ಬಿಟ್ಟಂತಾದೆನಯ್ಯ! ಇಹಲೋಕಕ್ಕೆ ದೂರ, ಪರಲೋಕಕ್ಕೆ ದೂರ ನಮ್ಮ ಕೂಡಲಸಂಗಮದೇವಯ್ಯ ಜಂಗಮಮುಖಲಿಂಗವಾದ ಕಾರಣ. ೨೫೪. ಲಿಂಗದಲ್ಲಿ ದಿಟವನರಸುವಡೆ ಜಂಗಮವ ನೆರೆ ನಂಬುವುದು. ನಡೆ ಲಿಂಗ, ನುಡಿ ಲಿಂಗ ಮುಖ ಲಿಂಗವೆಂದೆ ನಂಬೊ. ಯತ್ರ ಮಾಹೇಶ್ವರಸ್ತತ್ರಾಸನ್ನಹಿತನಾಗಿ, ಅಧರ ತಾಗಿದ ರುಚಿಯನು ಉದರ ತಾಗಿದ ಸುಖವ ಉಂಬ-ಉಡುವ ಕೂಡಲಸಂಗಮದೇವ ಜಂಗಮಮುಖದಲ್ಲಿ. ೨೫೫. ಎಂಬತ್ತುನಾಲ್ಕುಲಕ್ಷ ಮುಖದೊಳಗೊಂದೇ ಮುಖವಾಗಿ ಕಾಡಿ ನೋಡೆನ್ನನು, ಬೇಡಿ ನೋಡೆನ್ನನು ಬೇಡದಿದ್ದರೆ, ಅಯ್ಯ, ನಿಮಗೆ ಪ್ರಮಥರಾಣೆ! ನೀನಾವ ಮುಖದಲ್ಲಿ ಬಂದು ಬೇಡಿದರೀವೆನು ಕೂಡಲಸಂಗಮದ