Skip to main content

Posts

Showing posts from December 5, 2010

ಸರ್ವಜ್ಞನ ವಚನಗಳು - 151 ರಿಂದ 160

೧೫೧. ಬಲ್ಲವರ ಒಡನಾಡೆ | ಬೆಲ್ಲವನು ಸವಿದಂತೆ ಅಲ್ಲದಜ್ಞಾನಿಯೊಡನಾಡೆ - ಮೊಳಕೈಗೆ ಕಲ್ಲು ಹೊಡೆದಂತೆ ಸರ್ವಜ್ಞ ೧೫೨. ಬಂದುದನೆ ತಾ ಹಾಸಿ | ಬಂದುದನೆ ತಾ ಹೊದೆದು ಬಂದುದನೆ ಮೆಟ್ಟಿ ನಿಂತರೆ - ವಿಧಿ ಬಂದು ಮುಂದೇನ ಮಾಳ್ಕು ಸರ್ವಜ್ಞ ೧೫೩. ಸಿರಿ ಬಂದ ಕಾಲದಲಿ | ಕರೆದು ದಾನವ ಮಾಡು ಪರಿಣಾಮವಕ್ಕು ಪದವಕ್ಕು - ಕೈಲಾಸ ನೆರೆಮನೆಯಕ್ಕು ಸರ್ವಜ್ಞ ೧೫೪. ಏನ ಬೇಡುವಡೊಬ್ಬ | ದಾನಿಯನೆ ಬೇಡುವುದು ದೀನನ ಬೇಡಿ ಬಳಲಿದಡೆ - ಆ ದೀನ ನೇನ ಕೊಟ್ಟಾನು ಸರ್ವಜ್ಞ ೧೫೫. ಕೋಡಿಯನು ಕಟ್ಟಿದರೆ | ಕೇಡಿಲ್ಲವಾ ಕೆರೆಗೆ ಮಾಡು ಧರ್ಮಗಳ ಮನಮುಟ್ಟಿ - ಕಾಲನಿಗೆ ಈಡಾಗದ ಮುನ್ನ ಸರ್ವಜ್ಞ ೧೫೬. ಅನ್ನದಾನಗಳಿಗಿಂತ | ಇನ್ನು ದಾನಗಳಿಲ್ಲ ಅನ್ನಕ್ಕೆ ಮೇಲು ಹಿರಿದಿಲ್ಲ - ಲೋಕಕ್ಕೆ ಅನ್ನವೇ ಪ್ರಾಣ ಸರ್ವಜ್ಞ ೧೫೭. ಉಣ್ಣದೊಡವೆಯ ಗಳಿಸಿ | ಮಣ್ಣಾಗೆ ಬಚ್ಚಿಟ್ಟು ಚೆನ್ನಾಗಿ ಬಳಿದು ಮೆತ್ತಿದನ - ಬಾಯೊಳಗೆ ಮಣ್ಣು ಕಂಡಯ್ಯ ಸರ್ವಜ್ಞ ೧೫೮. ಕೊಟ್ಟಿರ್ದ ಕಾಲದಲಿ | ಅಟ್ಟುಣ್ಣಲರಿಯದೆ ಹುಟ್ಟಿಕ್ಕಿ ಜೇನು ಅನುಮಾಡಿ - ಪರರಿಗೆ ಕೊಟ್ಟು ಹೋದಂತೆ ಸರ್ವಜ್ಞ ೧೫೯. ಹೆಣ್ಣಿಂದ ಇಹವುಂಟು | ಹೆಣ್ಣಿಂದ ಪರವುಂಟು ಹೆಣ್ಣಿಂದ ಸಕಲ ಫಲವುಂಟು - ಮರೆದರೆ ಹೆಣ್ಣಿಂದ ಮರಣ ಸರ್ವಜ್ಞ ೧೬೦. ಮಜ್ಜಿಗೂಟಕೆ ಲೇಸು | ಮಜ್ಜನಕೆ ಮಡಿ ಲೇಸು ಕಜ್ಜಾಯ ತುಪ್ಪ ಉಣ