Skip to main content

Posts

Showing posts from November 17, 2010

ಅಲ್ಲಮಪ್ರಭುವಿನ ವಚನಗಳು : 91 ರಿಂದ 100

ಅಲ್ಲಮಪ್ರಭುವಿನ ವಚನಗಳು : 91 ರಿಂದ 100 ೯೧. ಲಿಂಗ ಒಳಗೋ ಹೊಱಗೋ ? ಬಲ್ಲಡೆ ನೀವು ಹೇಳಿರೇ ! ಲಿಂಗ ಎಡನೋ ಬಲನೋ ? ಬಲ್ಲಡೆ ನೀವು ಹೇಳಿರೇ ! ಲಿಂಗ ಮುಂದೋ ಹಿಂದೋ ? ಬಲ್ಲಡೆ ನೀವು ಹೇಳಿರೇ ! ಲಿಂಗ ಸ್ಥೂಲವೋ ಸೂಕ್ಷ್ಮವೋ ? ಬಲ್ಲಡೆ ನೀವು ಹೇಳಿರೇ ! ಲಿಂಗ ಪ್ರಾಣವೋ, ಪ್ರಾಣ ಲಿಂಗವೋ ? ಬಲ್ಲಡೆ ನೀವು ಹೇಳಿರೇ ? ಗುಹೇಶ್ವರ. ೯೨. ತನುವಿಂಗೆ ತನುವಾಗಿ ಮನಕ್ಕೆ ಮನವಾಗಿ ಜೀವಕ್ಕೆ ಜೀವವಾಗಿ ಇದ್ದುದನಾರು ಬಲ್ಲರೋ ?! ಅದು ದೂರವೆಂದು ಸಮೀಪವೆಂದು ಮಹಂತ ಗುಹೇಶ್ವರನೊಳಗೆಂದು ಹೊಱಗೆಂದು ಬಱುಸೂಱೆವೋದರು ! ಪ್ರಸಾದಿ ಸ್ಥಲ ೯೩. ಲಿಂಗಾರ್ಚನೆಯಿಲ್ಲದ ಮುನ್ನ ಸಿಂಗಿಯಾನಾರೋಗಿಸಿದಿರಿ ಸಂಜೆ ಸಮಾಧಿಗಳಿಲ್ಲದ ಮುನ್ನ ಉಂಡಿರಿ ಚೆನ್ನನ ಮನೆಯಲ್ಲಿ ಚಿತ್ರಗುಪ್ತರಱಿಯದ ಮುನ್ನ ಎತ್ತಿದಿರಿ ಕಾಂಚಿಯ ಪುರವ ಬೈಚಿಟ್ಟಿರಿ ಕೈಲಾಸವ ನಿಮ್ಮ ಚಿಕ್ಕುಟಾಧಾರದಲ್ಲಿ ಈರೇಳು ಭುವನಂಗಳೆಲ್ಲವೂ ನಿಮ್ಮ ರೋಮಕೂಪದಲ್ಲಡಗಿದವು ಪ್ರಾಣಾಪಾನ ವ್ಯಾನೋದಾನ ಸಮಾನರಹಿತ ಗುಹೇಶ್ವರ. ೯೪. ತ್ರಿವಿಧ ನಿತ್ಯವ ತ್ರಿವಿಧ ಅನಿತ್ಯವ ಬಲ್ಲವರಾರೋ ? ತ್ರಿವಿಧಕ್ಕೆ ತ್ರಿವಿಧವನಿತ್ತು ತ್ರಿವಿಧಪ್ರಸಾದದ ಕೊಳಬಲ್ಲಡೆ ಆತನ ಧೀರನೆಂಬೆ ! ಆತನ ಗುಹೇಶ್ವರಲಿಂಗದಲ್ಲಿ ಅಚ್ಚಪ್ರಸಾದಿಯೆಂಬೆ ! ೯೫. ಬೇಡದ ಮುನ್ನ ಮಾಡಬಲ್ಲಡೆ ಭಕ್ತ ಬೇಡುವನೆ ಲಿಂಗಜಂಗಮ ? ಬೇಡುವರಿಗೆಯೂ ಬೇಡಿಸಿಕೊಂಬವರಿಗೆಯೂ ಪ್ರಸಾದವಿಲ್ಲ ಗುಹೇಶ್ವರ. ೯೬. ಒಳಗ ತೊಳ