Skip to main content

Posts

Showing posts from November 25, 2010

ಸರ್ವಜ್ಞನ ವಚನಗಳು - 51 ರಿಂದ 60

ಸರ್ವಜ್ಞನ ವಚನಗಳು -  51 ರಿಂದ 60 ೫೧. ಗಂಗೆಯಾ ತಡೆ ಲೇಸು, ಮಂಗಳನ ಬಲ ಲೇಸು ಜಂಗಮ ಭಕ್ತನಾ ನಡೆ ಲೇಸು, ಶರಣರಾ ಸಂಗವೇ ಲೇಸು ಸರ್ವಜ್ಞ ೫೨. ಆಕಾಶಪಥ ಮೀರಿ, ದೇಕವಸ್ತುವ ತಿಳಿದು ಸಾಕಾರವಳಿದು ನಿಜವಾದ ಐಕ್ಯಂಗೆ ಏಕತ್ರ ನೋಡು ಸರ್ವಜ್ಞ ೫೩. ನಾನು-ನೀನುಗಳದು, ತಾನು ಲಿಂಗದಿ ಉಳಿದು ನಾನಾ ಭ್ರಮೆಗಳ ಅತಿಗಳೆದು ನಿಂದಾತ ತಾನೈಕ್ಯ ನೋಡು ಸರ್ವಜ್ಞ ೫೪. ಹೀನಂಗೆ ಗತಿಯಿಲ್ಲ, ದೀನಗನುಚಿತವಲ್ಲ ಏನು ಇಲ್ಲದವಗೆ ಭಯವಿಲ್ಲ ಐಕ್ಯಂಗೆ ತಾನೆಂಬುದಿಲ್ಲ ಸರ್ವಜ್ಞ ೫೫. ಆಗಿಲ್ಲ ಹೋಗಿಲ್ಲ, ಮೇಗಿಲ್ಲ ಕೆಳಗಿಲ್ಲ ತಾಗಿಲ್ಲ ತಪ್ಪು ತಡೆಯಿಲ್ಲ ಲಿಂಗಕ್ಕೆ ದೇಗುಲವೆ ಇಲ್ಲ ಸರ್ವಜ್ಞ ೫೬. ಅಲಸದಾ ಶಿವಪೂಜೆ ಹುಲುಸುಂಟು ಕೇಳಯ್ಯ ಬಲುಕವಲು ಒಡೆದು ಬೇರಿಂದ ತುದಿತನಕ ಹಲಸು ಕಾತಂತೆ ಸರ್ವಜ್ಞ ೫೭. ಉಂಡುಂಡು ತಿರುಗುವಾ ಭಂಡರಾ ಕಳೆ ಬೇಡ ಕಂಡು ಲಿಂಗವನು ಪೂಜಿಸಿದವಗೆ ಯಮ ದಂಡ ಕಾಣಯ್ಯ ಸರ್ವಜ್ಞ ೫೮. ಆತುಮದ ಲಿಂಗವನು ಪ್ರೀತಿಯಲಿ ಪೂಜಿಪಗೆ ಆತಂಕವಿಲ್ಲ ಭಯವಿಲ್ಲ ದಶವಿಧದ ಪಾತಕಗಳಿಲ್ಲ ಸರ್ವಜ್ಞ ೫೯. ಲಿಂಗವನು ಅಂದವನ ಅಂಗ ಹಿಂಗಿರಬೇಕು ತೆಂಗಿನಕಾಯಿ ಪರಿಪೂರ್ಣ ಬಲಿದು ಜಲ ಹಿಂಗಿದಪ್ಪಂದ ಸರ್ವಜ್ಞ ೬೦. ಅಂಗವನು ಲಿಂಗವನು ಸಂಗೊಳಿಸಲೆಂತಕ್ಕು ಲಿಂಗದಾ ನೆನಹು ಘನವಾಗೆ ಶಿವಲಿಂಗ ಹಿಂಗಿರದು ಅವನ ಸರ್ವಜ್ಞ