Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments. ೪೬೧. ಅಡಿಗಡಿಗೆ ಸ್ಥಾನನಿಧಿ! ಅಡಿಗಡಿಗೆ ದಿವ್ಯಕ್ಷೇತ್ರ! ಅಡಿಗಡಿಗೆ ನಿಧಿಯು ನಿಧಾನ! ನೋಡಾ! ಆತನಿರವೇ ಅವಿಮುಕ್ತ ಕ್ಷೇತ್ರ, ಕೂಡಲಸಂಗನ ಶರಣ ಸ್ವತಂತ್ರನಾಗಿ. ೪೬೨. ಧನದಲ್ಲಿ ಶುಚಿ, ಪ್ರಾಣದಲ್ಲಿ ನಿರ್ಭಯ ಇದಾವಂಗಳವಡುವುದಯ್ಯ ? ನಿಧಾನ ತಪ್ಪಿ ಬಂದರೆ ಒಲ್ಲೆನೆಂಬವರಿಲ್ಲ! ಪ್ರಮಾದವಶ ಬಂದರೆ ಹುಸಿಯೆನೆಂಬವರಿಲ್ಲ! ನಿರಾಶೆ, ನಿರ್ಭಯ, ಕೂಡಲಸಂಗಮದೇವ, ನೀನೊಲಿದ ಶರಣಂಗಲ್ಲದಿಲ್ಲ! ೪೬೩. ಹಲಬರ ನುಂಗಿದ ಹಾವಿಂಗೆ ತಲೆ-ಬಾಲವಿಲ್ಲ ನೋಡಾ! ಕೊಲುವುದು ತ್ರೈಜಗವೆಲ್ಲವ! ತನಗೆ ಬೇರೆ ಪ್ರಳಯವಿಲ್ಲ!! ನಾಕಡಿಯನೆಯ್ದದು, ಲೋಕದ ಕಡೆಯನೇ ಕಾಬುದು! ಸೂಕ್ಷ್ಮಪಥದಲ್ಲಿ ನಡೆವುದು, ತನಗೆ ಬೇರೊಡಲಿಲ್ಲ! ಅಹಂಕಾರವೆಂಬ ಗಾರುಡಿಗನ ನುಂಗಿತ್ತು ಕೂಡಲಸಂಗನ ಶರಣರಲ್ಲದುಳಿದವರ. ೪೬೪. ಉಂಬ ಬಟ್ಟಲು ಬೇರೆ ಕಂಚಲ್ಲ! ನೋಡುವ ದರ್ಪಣ ಬೇರೆ ಕಂಚಲ್ಲ! ಭಾಂಡ, ಭಾಜನ ಒಂದೆ! ಬೆಳಗೆ ಕನ್ನಡಿಯೆನಿಸಿತ್ತಯ್ಯ! ಅರಿದರೆ ಶರಣನು, ಮರೆದರೆ ಮಾನವನು! ಮರೆಯದೆ ಪೂಜಿಸು ಕೂಡಲಸಂಗನ. ೪೬೫. ಕೆರೆ ಹಳ್ಳ ಭಾವಿಗಳು ಮೈದೆಗೆದರೆ ಗುಳ್ಳೆ, ಗೊರಚೆ, ಚಿಪ್ಪು ಕಾಣಬಹವು! ವಾರಿಧಿ ಮೈದೆಗೆದರೆ...
ಬಸವಣ್ಣ,ಅಕ್ಕಮಹಾದೇವಿ,ಅಲ್ಲಮಪ್ರಭು ಮತೂ ಸರ್ವಜ್ಞರ ವಚನಗಳು