Skip to main content

Posts

Showing posts from October 21, 2010

ಅಕ್ಕನ ವಚನಗಳು - 111 ರಿಂದ 120 ರವರೆಗೆ

೧೧೧. ಭವಿಸಂಗವಳಿದು ಶಿವಭಕ್ತನಾದ ಬಳಿಕ ಭಕ್ತಂಗೆ ಭವಿಸಂಗವತಿ ಘೋರ ನರಕ ಶರಣಸತಿ-ಲಿಂಗಪತಿಯಾದ ಬಳಿಕ ಶರಣಂಗೆ ಸತಿಸಂಗವತಿಘೋರ ನರಕ ಚೆನ್ನಮಲ್ಲಿಕಾರ್ಜುನ, ಲಿಂಗೈಕ್ಯಂಗೆ ಪ್ರಾಣಗುಣವಳಿಯದವರ ಸಂಗವೇ ಭಂಗ ೧೧೨. ಹೂವು ಕಂದಿದಲ್ಲಿ ಪರಿಮಳವನರಸುವರೇ? [ಎನ್ನ ತಂದೆ] ಕಂದನಲ್ಲಿ ಕುಂದನರಸುವರೇ? ಎಲೆ ದೇವ, ಸ್ನೇಹವಿದ್ದ ಠಾವಿನೊಳು ದ್ರೋಹವಾದ ಬಳಿಕ ಮರಳಿ ಸದ್ಗುಣವನರಸುವರೇನಯ್ಯ? ನೀ ಎನ್ನ ತಂದೆ, ಹೂವು ಕಂದಿದಲ್ಲಿ [ಪರಿಮಳವನರಸುವರೇ?] ಕಂದನಲ್ಲಿ [ಕುಂದನರಸುವರೇ?] ಎಲೆ ದೇವ, ಬೆಂದ ಹುಣ್ಣಿಗೆ ಬೇಗೆಯನಿಕ್ಕುವರೇ? ಗುರುವೇ ಹೂವು ಕಂದಿದಲ್ಲಿ [ಪರಿಮಳವನರಸುವರೇ?] [ಕಂದನಲ್ಲಿ ಕುಂದನರಸುವರೇ?] ಕೇಳಯ್ಯ ಶ್ರೀಶೈಲ ಚೆನ್ನಮಲ್ಲಿಕಾರ್ಜುನ, ಹೊಳೆಯಳಿದ ಬಳಿಕ ಅಂಬಿಗಂಗೇನುಂಟು? ಹೂವು ಕಂದಿದಲ್ಲಿ [ಪರಿಮಳವನರಸುವರೇ?] [ಕಂದನಲ್ಲಿ ಕುಂದನರಸುವರೇ?] ೧೧೩. ಕಂಗಳಲ್ಲಿ ಕಾಂಬೆನೆಂದು ಕತ್ತಲೆಯ ಹೊಕ್ಕುಡೆಂತಹುದಯ್ಯ? ಬೆಟ್ಟದ ತುದಿಯ ಮೆಟ್ಟಿಲೆಂದು ಹಳ್ಳಕೊಳ್ಳಂಗಳಲ್ಲಿ ಇಳಿದೊಡೆಂತಹುದಯ್ಯ? ನೀನಿಕ್ಕಿದ ಸಯಿದಾನವನೊಲ್ಲದೆ ಬೇರೆ ಬಯಸಿದೊಡೆಂತಹುದಯ್ಯ? ಚೆನ್ನಮಲ್ಲಿಕಾರ್ಜುನನ ಘನವನರಿಯಲೆಂದು ಕಿರುಕುಳಕ್ಕೆ ಸಂದೊಡೆಂತಹುದಯ್ಯ? ೧೧೪. ಒಳಗಣ ಗಂಡನವ್ವಾ, ಹೊರಗಣ ಮಿಂಡನವ್ವಾ! ಎರಡನೂ ನಡೆಸಲು [ಬಾರದವ್ವ]! ಚೆನ್ನಮಲ್ಲಿಕಾರ್ಜುನಯ್ಯ, ಬಿಲ್ಲು [ಬೆಳವಲಕಾಯನೊಂದಾಗಿ] ಹಿಡಿಯಲು ಬಾರದಯ್ಯ!! ೧೧೫. ಚಿನ್ನಕ್ಕರಿಸಿನ ಚಿನ್ನಕ್