Skip to main content

Posts

Showing posts from February 14, 2011

ಬಸವಣ್ಣನ ವಚನಗಳು - 481 ರಿಂದ 490 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೪೮೧. ದಿಟ ಮಾಡಿ ಪೂಜಿಸಿದರೆ ಸಟೆ ಮಾಡಿ ಕಳೆವೆ. ಸಟೆ ಮಾಡಿ ಪೂಜಿಸಿದರೆ ದಿಟ ಮಾಡಿ ಕಳೆವೆ. ಏನೆಂಬೆನೆಂತೆಂಬೆ! ಸುಖಕ್ಕೆ ತುಂಬಿದ ದೀವಿಗೆ ಮನೆಯೆಲ್ಲವ ಸುಟ್ಟಂತೆ ಆನು ಮಾಡಿದ ಭಕ್ತಿ ಎನಗಿಂತಾಯಿತ್ತು ಕೂಡಲಸಂಗಮದೇವ. ೪೮೨. ಎಂಬತ್ತೆಂಟು ಪವಾಡವ ಮೆರೆದು ಹಗರಣದ ಚೋಹದಂತಾಯಿತ್ತೆನ್ನ ಭಕ್ತಿ; ತನುವಿನೊಳಗೆ ಮನ ಸಿಲುಕದೆ, ಮನದೊಳಗೆ ತನು ಸಿಲುಕದೆ ತನು ಅಲ್ಲಮನಲ್ಲಿ ಸಿಲುಕಿತ್ತು! ಮನ ಚೆನ್ನಬಸವಣ್ಣನಲ್ಲಿ ಸಿಲುಕಿತ್ತು ನಾನೇತರಲ್ಲಿ ನೆನೆವೆನಯ್ಯ ಕೂಡಲಸಂಗಮದೇವ ? ! ೪೮೩. ಬಸವ ಬಾರಯ್ಯ, ಮರ್ತ್ಯಲೋಕದೊಳಗೆ ಭಕ್ತರುಂಟೆ ಹೇಳಯ್ಯ ? ಮತ್ತಾರು ಇಲ್ಲಯ್ಯ, ಮತ್ತಾರು ಇಲ್ಲಯ್ಯ ! ನಾನೊಬ್ಬನೇ ಭಕ್ತನು, ಮರ್ತ್ಯಲೋಕದೊಳಗಣ ಭಕ್ತರೆಲ್ಲರೂ ಜಂಗಮಲಿಂಗ ನೀನೇ ಅಯ್ಯ ಕೂಡಲಸಂಗಮದೇವ!! ೪೮೪. ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗ, ಶರಣನೈಕ್ಯನು ಮೆಲ್ಲಮೆಲ್ಲನೆ ಆದೆನೆಂಬನ್ನಬರ, ನಾನು ವಜ್ರದೇಹಿಯೆ ? ನಾನೇನು ಅಮೃತವ ಸೇವಿಸಿದೆನೆ ? ನಾನು ಮರುಜೇವಣಿಯ ಕೊಂಡೆನೆ ? ನುಡಿದ ನುಡಿಯೊಳಗೆ ಷಡುಸ್ಥಲ ಬಂದು ನನ್ನ ಮನವನಿಂಬುಗೊಳದಿದ್ದರೆ ಸುಡುವೆನೀ ತನುವ ಕೂಡಲಸಂಗಮದೇವ