Skip to main content

Posts

Showing posts from December 3, 2010

ಸರ್ವಜ್ಞನ ವಚನಗಳು - 131 ರಿಂದ 140

೧೩೧. ಅಂಗವನು ಲಿಂಗವನು | ಸಂಗೊಳಿಸಲೆಂತಕ್ಕು ? ಲಿಂಗದೆ ನೆನಹು ಘನವಾಗೆ - ಆ ಅಂಗ ಲಿಂಗವಾಗಿಕ್ಕು ಸರ್ವಜ್ಞ ೧೩೨. ಕಂಗಳಿಚ್ಛೆಗೆ ಪರಿದು | ಭಂಗಗೊಳದಿರು ಮನುಜ ಲಿಂಗದಲಿ ಮನವ ನಿಲ್ಲಿಸಿ - ಸತ್ಯದಿ ನಿಲೆ ಲಿಂಗವೇಯಹೆಯೊ ಸರ್ವಜ್ಞ ೧೩೩. ಓದುವಾದಗಳೇಕೆ | ಗಾದೆಯ ಮಾತೇಕೆ ವೇದ-ಪುರಾಣ ನಿನಗೇಕೆ - ಲಿಂಗದ ಹಾದಿಯನರಿದವಗೆ ಸರ್ವಜ್ಞ ೧೩೪. ನೋಟ ಶಿವಲಿಂಗದಲಿ | ಕೂಟ ಜಂಗಮದಲ್ಲಿ ನಾಟಿ ತನು ಗುರುವಿನಲಿ ಕೂಡೆ - ಭಕ್ತನ ಸ ಘಾಟವದು ನೋಡ ಸರ್ವಜ್ಞ ೧೩೫. ನಾನು-ನೀನುಗಳಳಿದು | ತಾನೆ ಲಿಂಗದಿ ನಿಂದು ನಾನಾ ಭ್ರಮೆಗಳ ನೆರೆ ಹಿಂಗಿ - ನಿಂದವನು ತಾನೈಕ್ಯ ನೋಡ ಸರ್ವಜ್ಞ ೧೩೬. ತನ್ನ ನೋಡಲಿಯೆಂದು | ಕನ್ನಡಿ ಕರೆವುದೇ ತನ್ನಲ್ಲಿ ಜ್ಞಾನ ಉದಿಸಿದ - ಮಹತುಮನು ಕನ್ನಡಿಯಂತೆ ಸರ್ವಜ್ಞ ೧೩೭. ಹೆಣ್ಣನು ಹೊನ್ನನು | ಹಣ್ಣಾದ ಮರವನು ಕಣ್ಣಲಿ ಕಂಡು - ಮನದಲಿ ಬಯಸದ ಅಣ್ಣಗಳಾರು ಸರ್ವಜ್ಞ ೧೩೮. ತಿರಿದು ತಂದಾದೊಡಂ | ಕರೆದು ಜಂಗಮಕಿಕ್ಕು ಪರಿಣಾಮವಕ್ಕು ಪದವಕ್ಕು - ಕೈಲಾಸ ನೆರೆಮನೆಯಕ್ಕು ಸರ್ವಜ್ಞ ೧೩೯. ಆಡದೆಲೆ ಕೊಡುವವನು | ರೂಢಿಯೊಳಗುತ್ತಮನು ಆಡಿ ಕೊಡುವವನು ಮಧ್ಯಮನು - ಅಧಮ ತಾನಾಡಿಯೂ ಕೊಡದವನು ಸರ್ವಜ್ಞ ೧೪೦. ಮಾನವನ ದುರ್ಗುಣವ | ನೇನೆಂದು ಬಣ್ಣಿಸುವೆ ದಾನಗೈಯಲು ಕನಲುವ - ದಂಡವನು ಮೋನದಿಂ ತೆರುವ ಸರ್ವಜ್ಞ