Skip to main content

Posts

Showing posts from November 23, 2010

ಸರ್ವಜ್ಞನ ವಚನಗಳು - 31 ರಿಂದ 40

ಸರ್ವಜ್ಞನ ವಚನಗಳು -  31 ರಿಂದ 40 ೩೧. ಕಾಯ ಕಮಲದ ಸಜ್ಜೆ, ಜೀವರತನುವೆ ಲಿಂಗ ಭವ ಪುಶ್ಪದಿಂ ಶಿವಪೂಜೆ ಮಾಡುವರ ದೇವರೆಂದೆಂಬೆ ಸರ್ವಜ್ಞ ೩೨. ಓದು ವಾದಗಳೇಕೆ, ಗಾದಿಯ ಮಾತೇಕೆ ವೇದ ಪುರಾಣ ನಿನಗೇಕೆ? ಲಿಂಗದಾ ಹಾದಿಯರಿದವಗೆ ಸರ್ವಜ್ಞ ೩೩. ಒಪ್ಪಾದ ನುಡಿಯೇಕೆ? ಪುಷ್ಪವೇರಿಸಲೇಕೆ? ಅರ್ಪಿತನ ಗೊಡವೆ ತನಗೇಕೆ? ಲಿಂಗದ ನೆಪ್ಪನರಿದವಗೆ ಸರ್ವಜ್ಞ ೩೪. ಗಂಗೆ ಗೋದಾವರಿಯು, ತುಂಗಭದ್ರೆಯು ಮತ್ತೆ ಹಿಂಗದೆ ಮುಳುಗಿ ಫಲವೇನು? ನಿನ್ನಲ್ಲೆ ಲಿಂಗದರುವಿಲ್ಲ ಸರ್ವಜ್ಞ ೩೫. ಮೆಟ್ಟಿದಾ ಕಲ್ಲಿಂಗೆ, ಮೊಟ್ಟೆ ಪತ್ರಿಯ ಹಾಕಿ ಕಟ್ಟಿದಾ ಲಿಂಗ ಅಡಿಮಾಡಿ ಶರಣೆಂಬ ಭ್ರಷ್ಟನ ಕಂಡ್ಯಾ ? ಸರ್ವಜ್ಞ ೩೬. ಗುರುವಿಂದ ಬಂಧುಗಳು, ಗುರುವಿಂದ ದೈವಗಳು ಗುರುವಿಂದಲಿಹುದು ಪುಣ್ಯವದು, ಜಗಕೆಲ್ಲ ಗುರುವಿಂದ ಮುಕ್ತಿ ಸರ್ವಜ್ಞ ೩೭. ಶಿವಪೂಜೆ ಮಾಡಿದಡೆ, ಶಿವನ ಕೊಂಡಾಡಿದಡೆ ಶಿವನಲ್ಲಿ ನೆನೆಹ ನಿಲಿಸಿದಡೆ ಶಿವಲೋಕ ವವಗೆ ಕಾಣಯ್ಯ ಸರ್ವಜ್ಞ ೩೮. ನಿಷ್ಠೆ ಇದ್ದಡೆ ಶಿವನು, ಗಟ್ಟಿಗೊಂಡೊಳಗಿರ್ಪ ನಿಷ್ಠೆಯಿಲ್ಲದಲೆ ಭಜಿಸಿದೊಡೆ ಶಿವನವನ ಬಿಟ್ಟು ಬಯಲಪ್ಪ ಸರ್ವಜ್ಞ ೩೯. ಇಟ್ಟಾವಿಭೂತಿ ತಾ ಪಟ್ಟಗಟ್ಟಿರುತಿಕ್ಕು ಇಟ್ಟಾವಿಭೂತಿಯರಿಯದಿರೆ ಸೀಳಿದಾ ಬಟ್ಟೆಯಂತಕ್ಕು ಸರ್ವಜ್ಞ ೪೦. ಲಿಂಗದಲಿ ಮನವಾಗಿ, ಲಿಂಗದಲಿ ನೆನಹಾಗಿ ಲಿಂಗದಲಿ ನೋಟ, ನುಡಿಕೂಟವಾದವನು ಲಿಂಗವೇ ಅಕ್ಕು ಸರ್ವಜ್ಞ