Skip to main content

Posts

Showing posts from December 7, 2010

ಸರ್ವಜ್ಞನ ವಚನಗಳು - 171 ರಿಂದ 180

೧೭೧. ಜ್ಞಾನಿಯನಜ್ಞಾನಿಯೆಂದು | ಹೀನ ತಾ ನುಡಿದರೆ ಆನೆಯನೇರಿ ಸುಖದಿಂದಲಿ - ಹೋಹಂಗೆ ಶ್ವಾನ ಬೊಗಳ್ದೇನು ಸರ್ವಜ್ಞ ೧೭೨. ತುಂಬಿದಾ ಕೆರೆಭಾವಿ | ತುಂಬಿಹುದೆನಬೇಡ ನಂಬಿರಬೇಡ ಲಕ್ಶ್ಮಿಯನು - ಬಡತನವು ಬೆಂಬಳಿಯೊಳಿಹುದು ಸರ್ವಜ್ಞ ೧೭೩. ಕೇಡನೊಬ್ಬನಿಗೆ ಬಯಸೆ | ಕೇಡು ತಪ್ಪದು ತನಗೆ ಕೂಡಿ ಕೆಂಡವನು ತೆಗೆದೊಡೆ - ತನ್ನ ಕೈ ಕೂಡೆ ಬೇವಂತೆ ಸರ್ವಜ್ಞ ೧೭೪. ಅರಸು ಮುನಿದೂರೊಳಗೆ | ಇರುವುದೇ ಕರ ಕಷ್ಟ ಅರಸು ಮನ್ನಣೆಯು ಕರಗಿದ - ಠಾವಿಂದ ಸರಿವುದೇ ಲೇಸು ಸರ್ವಜ್ಞ ೧೭೫. ಆಶೆಯುಳ್ಳನ್ನಕ್ಕರ - ದಾಸನಾಗಿರುತಿಪ್ಪ ಆಶೆಯ ತಲೆಯನಳಿದರೆ - ಕೈಲಾಸ ದಾಚೆಯಲಿಪ್ಪ ಸರ್ವಜ್ಞ ೧೭೬. ಧಾರುಣಿ ನಡುಗುವುದು | ಮೇರುವಲ್ಲಾಡುವುದು ವಾರಿಧಿ ಬತ್ತಿ ಬರೆವುದು - ಶಿವಭಕ್ತಿ ಯೋರೆಯಾದಂದು ಸರ್ವಜ್ಞ ೧೭೭. ಮಂದಿಯಿಲ್ಲದರಸು | ತಂದೆ ಇಲ್ಲದ ಕಂದ ಬಂಧುಗಳಿಲ್ಲದಿಹ ಬಡತನ - ಇವು ತಾನು ಎಂದಿಗೂ ಬೇಡ ಸರ್ವಜ್ಞ ೧೭೮. ಅನ್ನವಿಕ್ಕದನಿಂದ | ಕುನ್ನಿ ತಾ ಕರ ಲೇಸು ಉನ್ನತವಪ್ಪತಿಥಿಗಿಕ್ಕದ ಬದುಕು - ನಾಯ ಕುನ್ನಿಯಿಂ ಕಷ್ಟ ಸರ್ವಜ್ಞ ೧೭೯. ಉರಿಯುದಕ ಶೀತವು | ಉರಗಪತಿ ಭೀಕರವು ಗುರುವಾಜ್ಞೆಗಂಜಿ ಕೆಡುವವು - ಇದ ನರ ರರಿಯದೆ ಕೆಡುಗು ಸರ್ವಜ್ಞ ೧೮೦. ಶೇಷನಿಂ ಹಿರಿದಿಲ್ಲ | ಆಸೆಯಿಂ ಕೀಳಿಲ್ಲ ರೋಷದಿಂದಧಮಗತಿಯಿಲ್ಲ - ಪರದೈವ ಈಶನಿಂದಿಲ