Skip to main content

Posts

Showing posts from September 10, 2010

ಬಸವಣ್ಣನ ವಚನಗಳು - 191 ರಿಂದ 200 ರವರೆಗೆ

೧೯೧. ಓತಿ ಬೇಲಿವರಿದಂತೆನ್ನ ಮನವಯ್ಯ, ಹೊತ್ತಿಗೊಂದು ಪರಿಯಪ್ಪ ಗೋಸುಂಬೆಯಂತೆನ್ನ ಮನವು. ಬಾವಲ ಬಾಳುವೆಯಂತೆನ್ನ ಮನವು. ನಡುವಿರುಳೆದ್ದ ಕುರುಡಂಗಗುಸೆಯಲ್ಲಿ ಬೆಳಗಾದಂತೆ ನಾನಿಲ್ಲದ ಭಕ್ತಿಯ ಬಯಸಿದರುಂಟೆ ಕೂಡಲಸಂಗಮದೇವ. ೧೯೨. ಶಬ್ದ-ಸಂಭಾಷಣೆಯ ನುಡಿಯ ವರ್ಚ್ಚಿಸಿ ನುಡಿವೆ ತೊಡೆಹದ ಕೆಲಸದ ಬಣ್ಣದಂತೆ! ಕಡಿಹಕ್ಕೆ ಒರಗೆ ಬಾರದು ನೋಡಾ! ಎನ್ನ ಮನದಲೊಂದು, ಹೃದಯದಲೊಂದು, ವಚನದಲೊಂದು ನೋಡಾ! ಕೂಡಲಸಂಗಮದೇವ, ಆನು ಭಕ್ತನೆಂಬ ಹುಸಿಯ ಮಸಕವನೇನ ಬಣ್ಣಿಸುವೆನಯ್ಯ! ೧೯೩. ಏನನೋದಿ, ಏನ ಕೇಳಿ, ಏನ ಮಾಡಿಯೂ ಫಲವೇನು ನಿನ್ನವರೊಲಿಯದನ್ನಕ ? ಶಿವ ಶಿವ ಮಹಾದೇವ! ಬಾಳಿಲ್ಲದವಳ ಒಲೆಯಂತಾಯಿತ್ತೆನಗೆ ಕೂಡಲಸಂಗಮದೇವ. ೧೯೪. ಮುನ್ನೂರರವತ್ತು ದಿನ ಶರವ ಮಾಡಿ, ಕಳನೇರಿ ಕೈಮರೆದಂತಾಯಿತ್ತೆನ್ನ ಭಕ್ತಿ! ಎನಿಸು ಕಾಲ ಲಿಂಗಾರ್ಚನೆಯ ಮಾಡಿ ಏವೆನಯ್ಯ ಮನದಲ್ಲಿ ದೃಢವಿಲ್ಲದನ್ನಕ ? ಕೊಡನ ತುಂಬಿದ ಹಾಲ ಕೆಡಹಿ ಉಡುಗಲೆನ್ನಳವೆ ಕೂಡಲಸಂಗಮದೇವ. ೧೯೫. ಅಂಕ ಓಡಿದರೆ ತೆತ್ತಿಗಂಗೆ ಭಂಗವಯ್ಯ, ಕಾದಿ ಗೆಲಿಸಯ್ಯ-ಎನ್ನನು ಕಾದಿ ಗೆಲಿಸಯ್ಯ, ಕೂಡಲಸಂಗಮದೇವಯ್ಯ, ಎನ್ನ ತನು-ಮನ-ಧನದಲ್ಲಿ ವಂಚನೆಯಿಲ್ಲದಂತೆ ಮಾಡಯ್ಯ. ೧೯೬. ಅಂಕ ಕಳನೇರಿ ಕೈಮರೆದಿದ್ದರೆ ಮಾರಂಕ ಬಂದಿರಿವುದು ಮಾಬನೆ ? ನಿಮ್ಮ ನೆನವ ಮತಿ ಮರೆದಿದ್ದರೆ ಪಾಪ ತನುವನಂಡಲೆವುದ ಮಾಬುದೆ