Skip to main content

Posts

Showing posts from December 2, 2010

ಸರ್ವಜ್ಞನ ವಚನಗಳು - 121 ರಿಂದ 130

೧೨೧. ಓರ್ವನಲ್ಲದೆ ಮತ್ತೆ | ಈರ್ವರುಂಟೇ ಮರುಳೆ ಸರ್ವಜ್ಞನೋರ್ವ ಜಗಕೆಲ್ಲ - ಕರ್ತಾರ ನೋರ್ವನೇ ದೇವ ಸರ್ವಜ್ಞ ೧೨೨. ಎಂಜಲು ಶೌಚವು | ಸಂಜೆಯೆಂದೆನ ಬೇಡ ಕುಂಜರ ವನವ ನೆನೆವಂತೆ - ಬಿಡದೆ ನಿ ರಂಜನನ ನೆನೆಯ ಸರ್ವಜ್ಞ ೧೨೩. ಭೂತೇಶ ಶರಣೆಂಬ | ಜಾತಿ ಮಾದಿಗನಲ್ಲ ಜಾತಿಯಲಿ ಹುಟ್ಟಿ ಭೂತೇಶ - ಶರಣೆನ್ನ ದಾತ ಮಾದಿಗನು ಸರ್ವಜ್ಞ ೧೨೪. ಯಾತರ ಹೂವಾದರು | ನಾತರೆ ಸಾಲದೆ ಜಾತಿ-ವಿಜಾತಿ ಯೆನಬೇಡ - ಶಿವನೊಲಿ ದಾತನೇ ಜಾತಿ ಸರ್ವಜ್ಞ ೧೨೫. ಮಾಯಾಮೋಹವ ನೆಚ್ಚಿ | ಕಾಯವನು ಕರಗಿಸುತೆ ಆಯಾಸಗೊಳುತ ಇರಬೇಡ - ಓಂ ನಮಶ್ಯಿ ವಾಯವೆಂದೆನ್ನಿ ಸರ್ವಜ್ಞ ೧೨೬. ಮುನಿವಂಗೆ ಮುನಿಯದಿರು | ಕನೆವಂಗೆ ಕನೆಯದಿರು ಮನಸಿಜಾರಿಯನು ಮರೆಯದಿರು - ಶಿವನ ಕೃಪೆ ಘನಕೆ ಘನವಕ್ಕು ಸರ್ವಜ್ಞ ೧೨೭. ನರರ ಬೇಡುವ ದೈವ | ವರವೀಯ ಬಲ್ಲುದೇ ತಿರಿವವರನಡರಿ ತಿರಿವಂತೆ - ಅದನರಿ ಹರನನೆ ಬೇಡು ಸರ್ವಜ್ಞ ೧೨೮. ಲಿಂಗವ ಪೂಜಿಸುವಾತ | ಜಂಗಮಕೆ ನೀಡದೊಡೆ ಲಿಂಗದ ಕ್ಷೋಭೆ ಘನವಕ್ಕು - ಮಹಲಿಂಗ ಹಿಂಗುವುದು ಅವನ ಸರ್ವಜ್ಞ ೧೨೯. ಉಣ ಬಂದ ಲಿಂಗಕ್ಕೆ | ಉಣಲಿಕ್ಕದಂತಿರಿಸಿ ಉಣದಿರ್ಪ ಲಿಂಗಕ್ಕುಣ ಬಡಿಸಿ - ಕೈ ಮುಗಿವ ಬಣಗುಗಳ ನೋಡ ಸರ್ವಜ್ಞ ೧೩೦. ಒಮ್ಮನದಲ್ಲಿ ಶಿವಪೂಜೆಯ | ಗಮ್ಮನೆ ಮಾಡುವುದು ಇಮ್ಮನವಿಡಿದು ಕೆಡಬೇಡ - ವಿಧಿವಶವು ಸುಮ್ಮನೆ ಕೆಡಗು ಸರ್