Skip to main content

Posts

Showing posts from December 4, 2010

ಸರ್ವಜ್ಞನ ವಚನಗಳು - 141 ರಿಂದ 150

೧೪೧. ಅಂತಕ್ಕು ಇಂತಕ್ಕು | ಎಂತಕ್ಕು ಎನಬೇಡ ಚಿಂತಿಸಿ ಸುಯ್ವುತಿರಬೇಡ ಶಿವನಿರಿಸಿ ದಂತಿಹುದೆ ಲೇಸು ಸರ್ವಜ್ಞ ೧೪೨. ಸಿರಿಯು ಸಂಸಾರವು | ಸ್ಥಿರವೆಂದು ನಂಬದಿರು ಹಿರಿದೊಂದು ಸಂತೆ ನೆರೆದೊಂದು - ಜಾವಕ್ಕೆ ಹರೆದು ಹೋಹಂತೆ ಸರ್ವಜ್ಞ ೧೪೩. ದಂತಪಂಕ್ತಿಗಳೊಳಗೆ | ಎಂತಿಕ್ಕು ನಾಲಗೆಯು ಸಂತತ ಖಳರ ಒಡನಿರ್ದು - ಬಾಳುವು ದಂತೆ ಕಂಡಯ್ಯ ಸರ್ವಜ್ಞ ೧೪೪. ಹಸಿಯದಿರೆ ಕಡುಗಾದ | ಬಿಸಿನೀರ ಕೊಂಬುದು ಹಸಿವಕ್ಕು ಸಿಕ್ಕ ಮಲ ಬಿಡುಗು - ದೇಹ ತಾ ಸಸಿನವಾಗುವುದು ಸರ್ವಜ್ಞ ೧೪೫. ಹಸಿವಿಲ್ಲದುಣಬೇಡ | ಹಸಿದು ಮತ್ತಿರಬೇಡ ಬಿಸಿ ಬೇಡ ತಂಗುಳವು ಬೇಡ - ವೈದ್ಯನ ಗಸಣಿಸಿಯೇ ಬೇಡ ಸರ್ವಜ್ಞ ೧೪೬. ಜಾತಿ ಹೀನನ ಮನೆಯ | ಜ್ಯೋತಿ ತಾ ಹೀನವೇ ಜಾತಿ-ವಿಜಾತಿಯೆನಬೇಡ - ದೇವನೊಲಿ ದಾತನೇ ಜಾತ ಸರ್ವಜ್ಞ ೧೪೭. ಕ್ಷಣಮಾತ್ರವಾದರೂ | ಗುಣಿಗಳೊಡನಾಡುವುದು ಗುಣಹೀನರುಗಳ ಒಡನಾಟ - ಬಹುದುಃಖ ದಣಲೊಳಿರ್ದಂತೆ ಸರ್ವಜ್ಞ ೧೪೮. ಬಸವ ಗುರುವಿನ ಹೆಸರ | ಬಲ್ಲವರಾರಿಲ್ಲ ಪುಸಿಮಾತನಾಡಿ ಕೆಡದಿರಿ - ಲೋಕಕ್ಕೆ ಬಸವನೇ ಕರ್ತ ಸರ್ವಜ್ಞ ೧೪೯. ಹಸಿದೊಡಂಬಲಿ ಮುದ್ದು | ಬಿಸಿಲಿಗೆ ಕೊಡೆ ಮುದ್ದು ಬಸುರಲ್ಲಿ ಬಂದ ಶಿಶು ಮುದ್ದು - ಲೋಕಕ್ಕೆ ಬಸವಣ್ಣನೇ ಮುದ್ದು ಸರ್ವಜ್ಞ ೧೫೦. ಕತ್ತೆ ಬೂದಿಯ ಹೊರಳಿ | ಭಕ್ತನಂತಾಗುವುದೆ ತತ್ವವರಿಯದಲೆ ಭಸಿತವಿಟ್ಟರೆ