Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments. ೩೧೧. ಸಕಲ-ನಿಷ್ಕಲವ ಕೂಡಿಕೊಂಡಿಪ್ಪೆಯಾಗಿ ಸಕಲ ನೀನೆ, ನಿಷ್ಕಲ ನೀನೇ ಕಂಡಯ್ಯ! ವಿಶ್ವತಶ್ಚಕ್ಷು ನೀನೇ ದೇವ! ವಿಶ್ವತೋಬಾಹು ನೀನೇ ದೇವ ವಿಶ್ವತೋಮುಖ ನೀನೇ ದೇವ! ಕೂಡಲಸಂಗಮದೇವ. ೩೧೨. ಎತ್ತೆತ್ತ ನೋಡಿದಡತ್ತತ್ತ ನೀನೇ ದೇವ! ಸಕಲ ವಿಸ್ತಾರದ ರೂಹು ನೀನೇ ದೇವ. ವಿಶ್ವತಶ್ಚಕ್ಷು ನೀನೇ ದೇವ, ವಿಶ್ವತೋಮುಖ ನೀನೇ ದೇವ. ವಿಶ್ವತೋಬಾಹು ನೀನೇ ದೇವ. ವಿಶ್ವತೋಪಾದ ನೀನೇ ದೇವ. ಕೂಡಲಸಂಗಮದೇವ. ೩೧೩. ಹರನ ಕೊರಳಲ್ಲಿಪ್ಪ ಕರೋಟಿಮಾಲೆಯ ಶಿರದ ಲಿಖಿತವ ಕಂಡು, ಮರುಳುತಂಡಗಳು ಓದಿನೋಡಿ "ಇವನಜ, ಇವ ಹರಿ, ಇವ ಸುರಪತಿ ಇವ ಧರಣೀಂದ್ರ, ಇವನಂತಕ"ನೆಂದು ಹರುಷದಿಂದ ಸರಸವಾಡುವುದ ಹರ ನೋಡಿ ಮುಗುಳುನಗೆಯ ನಗುತ್ತಿದ್ದನು! ಕೂಡಲಸಂಗಮದೇವ. ೩೧೪. ಅದುರಿತು ಪಾದಘಾತದಿಂದ ಧರೆ! ಬಿದಿರಿದವು ಮಕುಟ ತಾಗಿ ತಾರಕಿಗಳು ಉದುರಿದವು ಕೈತಾಗಿ ಲೋಕಂಗಳೆಲ್ಲ! "ಮಹೀ ಪಾದಾಘಾತಾದ್ವ್ರಜತಿ ಸಹಸಾ ಸಂಶಯಪದಂ ಪದಂ ವಿಷ್ಣೋರ್ಭ್ರಾಮ್ಯದ್ಭುಜಪರಿಘರುಗ್ಣಗ್ರಹಗಣಂ! ಮುಹರ್ದ್ಯೌರ್ಧ್ವಸ್ತಾತ್ಯಂತ್ಯನಿಭೃತಜಟಾತಾಟಿತತಟಾ ಜಗದ್ರಕ್ಷಾಯೈ ತ್ವಂ ನನು ವಹಸಿ ಭೌಮಾಂ ಚ ವಿಭುತಾಂ"...
ಬಸವಣ್ಣ,ಅಕ್ಕಮಹಾದೇವಿ,ಅಲ್ಲಮಪ್ರಭು ಮತೂ ಸರ್ವಜ್ಞರ ವಚನಗಳು