Skip to main content

Posts

Showing posts from December 1, 2010

ಸರ್ವಜ್ಞನ ವಚನಗಳು - 111 ರಿಂದ 120

೧೧೧. ಮೊಸರ ಕಡೆಯಲು ಬೆಣ್ಣೆ | ಒಸೆದು ತೋರುವ ತೆರದಿ ಹಸನುಳ್ಳ ಗುರುವಿನುಪದೇಶ - ದಿಂ ಮುಕ್ತಿ ವಶವಾಗದಿಹುದೆ ಸರ್ವಜ್ಞ ೧೧೨. ಗುರುಪಾದ ಸೇವೆ ತಾ ದೊರಕೊಂಡಿತಾದೊಡೆ ಹಿರಿದಪ್ಪ ಪಾಪ ಹರೆವುದು - ಕರ್ಪುರದ ಗಿರಿಯ ಸುಟ್ಟಂತೆ ಸರ್ವಜ್ಞ ೧೧೩. ಎತ್ತಾಗಿ ತೊತ್ತಾಗಿ | ಹಿತ್ತಿಲದ ಗಿಡವಾಗಿ ಮತ್ತೆ ಪಾದದ ಕೆರವಾಗಿ - ಗುರುವಿನ ಹತ್ತಿಲಿರು ಎಂದ ಸರ್ವಜ್ಞ ೧೧೪. ಸಾಣೆಕಲ್ಲೊಳು ಗಂಧ | ಮಾಣದೆ ಎಸೆವಂತೆ ಜಾಣ ಶ್ರೀಗುರುವಿನುಪದೇಶ - ದಿಂ ಮುಕ್ತಿ ಕಾಣಿಸುತಿಹುದು ಸರ್ವಜ್ಞ ೧೧೫. ಬೆಟ್ಟ ಕರ್ಪುರ ಉರಿದು | ಬೊಟ್ಟಿಡಲು ಬೂದಿಲ್ಲ ನೆಟ್ಟನೆ ಗುರುವಿನರಿದನ - ಕರ್ಮವು ಮುಟ್ಟಲಂಜುವವು ಸರ್ವಜ್ಞ ೧೧೬. ವಿಷಯಕ್ಕೆ ಕುದಿಯದಿರು | ಅಶನಕ್ಕೆ ಹದೆಯದಿರು ಅಸಮಾಕ್ಷನಡಿಯನಗಲದಿರು - ಗುರುಕರುಣ ವಶವರ್ತಿಯಹುದು ಸರ್ವಜ್ಞ ೧೧೭. ತಂದೆಗೆ ಗುರುವಿಗೆ | ಒಂದು ಅಂತರವುಂಟು ತಂದೆ ತೋರುವನು ಶ್ರೀಗುರುವ - ಗುರುರಾಯ ಬಂಧನವ ಕಳೆವ ಸರ್ವಜ್ಞ ೧೧೮. ಹಸಿಯ ಸೌದೆಯ ತಂದು | ಹೊಸೆದರುಂಟೇ ಕಿಚ್ಚು ವಿಷಯಂಗಳುಳ್ಳ ಮನುಜರಿಗೆ - ಗುರುಕರುಣ ವಶವರ್ತಿಯಹುದೆ ಸರ್ವಜ್ಞ ೧೧೯. ಒಂದೂರ ಗುರುವಿರ್ದು | ವಂದನೆಯ ಮಾಡದೆ ಸಂಧಿಸಿ ಕೂಳ ತಿನುತಿರ್ಪವನ - ಇರವು ಹಂದಿಯ ಇರವು ಸರ್ವಜ್ಞ ೧೨೦. ಲಿಂಗದ ಗುಡಿಯೆಲ್ಲಿ ? ಲಿಂಗಿಲ್ಲದೆಡೆಯೆಲ್ಲಿ ? ಲಿಂಗದೆ ಜ