Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments. ೩೦೧. ಕಾಮ ಸಂಗವಳಿದು, ಅನುಭಾವ ಸಂಗದಲುಳಿದವರನಗಲಲಾರೆ, ಶಿವಂಗೆ ಮಿಗೆ ಒಲಿದವರನು ನಾನು ಅಗಲಲಾರೆ ಕಾಣಾ ಕೂಡಲಸಂಗಮದೇವ. ೩೦೨. ಭಕ್ತಿರತಿಯ ವಿಕಲತೆಯ ಯುಕುತಿಯನೇನ ಬೆಸಗೊಂಬಿರಯ್ಯ ? ಕಾಮಿಗುಂಟೇ ಲಜ್ಜೆ ನಾಚಿಕೆ ? ಕಾಮಿಗುಂಟೇ ಮಾನಾಪಮಾನವು ? ಕೂಡಲಸಂಗನ ಶರಣರಿಗೊಲಿದ ಮರುಳನನೇನ ಬೆಸಗೊಂಬಿರಯ್ಯ ? ೩೦೩. ಸಕ್ಕರೆಯ ಕೊಡನ ತುಂಬಿ ಹೊರಗ ಸವಿದರೆ ರುಚಿಯುಂಟೆ ? ತಕ್ಕೈಸಿ ಭುಜತುಂಬಿ, ಲಿಂಗಸ್ಪರ್ಶನವ ಮಾಡದೆ, ಅಕ್ಕಟಾ, ಸಂಸಾರ ವೃಥಾ ಹೋಯಿತ್ತಲ್ಲ! ಅದೇತರ ಭಕ್ತಿ ? ಅದೇತರ ಯುಕ್ತಿ ? ಕೂಡಿಕೊ! ಕೂಡಲಸಂಗಮದೇವ. ೩೦೪. ಪರಚಿಂತೆ ಎಮಗೇಕಯ್ಯ ? ನಮ್ಮ ಚಿಂತೆ ಎಮಗೆ ಸಾಲದೆ ? ಕೂಡಲಸಂಗಯ್ಯ ಒಲಿದಾನೋ ಒಲಿಯನೋ ಎಂಬ ಚಿಂತೆ ಹಾಸಲುಂಟು ಹೊದಿಯಲುಂಟು! ೩೦೫. ಲಜ್ಜೆಗೆಟ್ಟೆನು, ನಾಣುಗೆಟ್ಟೆನು, ಕುಲಗೆಟ್ಟೆನು, ಛಲಗೆಟ್ಟೆನು, ಸಂಗಾ, ನಿಮ್ಮ ಪೂಜಿಸಿ ಭವಗೆಟ್ಟೆನು ನಾನಯ್ಯ! ಕೂಡಲಸಂಗಮದೇವಯ್ಯ, ನಿಮ್ಮ ಮುಟ್ಟಿ ಹುಟ್ಟುಗೆಟ್ಟೆನು ನಾನಯ್ಯ! ೩೦೬. ಮಾಡುವ ಭಕ್ತನ ಕಾಯ ಬಾಳೆಯ ಕಂಬದಂತಿರಬೇಕು! ಮೆಲ್ಲಮೆಲ್ಲನೆ ಹೊರೆಯೆತ್ತಿ ನೋಡಿದರೆ ಒಳಗೆ ಕೆಚ್ಚಿಲ್ಲದಿರಬೇಕ...
ಬಸವಣ್ಣ,ಅಕ್ಕಮಹಾದೇವಿ,ಅಲ್ಲಮಪ್ರಭು ಮತೂ ಸರ್ವಜ್ಞರ ವಚನಗಳು