Skip to main content

Posts

Showing posts from November 21, 2010

ಸರ್ವಜ್ಞನ ವಚನಗಳು - 11 ರಿಂದ 20

೧೧. ಹರನಿಚ್ಛೆಯಿಲ್ಲದಲೆ ಹರಿದು ಹೋಗದು ಪಾಪ ಹರಭಕ್ತಿಯುಳ್ಳ ಗುರುವರನು ಓರ್ವನೇ ನರ  ದೈವವೆಂಬೆ ಸರ್ವಜ್ಞ ೧೨. ಬಂಧುಗಳು ಆದವರು ಬಂದುಂಡು ಹೋಗುವರು ಬಂಧನವ ಕಳೆಯಲರಿಯರಾ  ಗುರುವಿಗಿಂತ ಬಂಧುಗಳುಂಟೆ ಸರ್ವಜ್ಞ ೧೩. ಜೀವ, ಸದ್ಗುರುನಾಥ, ಕಾಯ ಪುಸಿಯನೆ ತೋರಿ ಮಾಯನಾಶವನು ಹರಿಸುತ್ತ  ಶಿಷ್ಯಂಗೆ ತಾಯಿಯಂತಾದ ಸರ್ವಜ್ಞ ೧೪. ತಂದೆಗೂ ಗುರುವಿಗೂ ಒಂದು ಅಂತರವುಂಟು ತಂದೆ ತೋರುವನು ಸದ್ಗುರುವ.  ಗುರುರಾಯ ಬಂಧನವ ಕಳೆವ ಸರ್ವಜ್ಞ ೧೫. ಗುರುವಿಂಗೆ ದೈವಕ್ಕೆ, ಹಿರಿದು ಅಂತರವುಂಟು ಗುರುತೋರ್ವ ದೈವದೆಡೆಯನು  ದೈವತಾ ಗುರುವ ತೋರುವನೇ? ಸರ್ವಜ್ಞ ೧೬. ಗುರುಪಾದಕೆರಗಿದರೆ, ಶಿರಸು ತಾ ಮಣಿಯಕ್ಕು ಪರಿಣಾಮವಕ್ಕು ಪದವಕ್ಕು  ಕೈಲಾಸ ನೆರಮನೆಯಕ್ಕು ಸರ್ವಜ್ಞ ೧೭. ಒಂದರೊಳಗೆಲ್ಲವು ಸಂದಿಸುವದನು ಗುರು ಚಂದದಿಂ ತೋರಿಕೊಡದಿರಲು  ಶೊಷ್ಯನವ ಕೊಂದನೆಂದರಿಗು ಸರ್ವಜ್ಞ ೧೮. ಲಿಂಗಕ್ಕೆ ಕಡೆ ಎಲ್ಲಿ, ಲಿಂಗದೆಡೆ ಎಲ್ಲಿ ಲಿಂಗದೊಳು ಜಗವು ಅಡಗಿಹುದು  ಲಿಂಗವನು ಹಿಂಗಿದವರುಂಟೆ? ಸರ್ವಜ್ಞ ೧೯. ದೆಶಕ್ಕೆ ಸಜ್ಜನನು, ಹಾಸ್ಯಕ್ಕೆ ಹನುಮಂತ ಕೇಶವನು ಭಕ್ತರೊಳಗೆಲ್ಲ ಮೂರು  ಕ ಣ್ಣೇಶನೆ ದೈವ ಸರ್ವಜ್ಞ ೨೦. ಉಂಬಳಿಯ ಇದ್ದವನು ಕಂಬಳಿಯ ಹೊದೆಯುವನೇ? ಶಂಭುವಿರಲಿಕ್ಕೆ ಮತ್ತೊಂದು  ದೈವವ ನಂಬುವನೇ ಹೆಡ್ಡ ಸರ್ವಜ್ಞ