Skip to main content

Posts

Showing posts from December 6, 2010

ಸರ್ವಜ್ಞನ ವಚನಗಳು - 161 ರಿಂದ 170

೧೬೧. ಸಿರಿ ಬಲ ಉಳ್ಳಾಗ | ಮರೆಯದವನೇ ಜಾಣ ಕೊರತೆಯಾದಾಗ ಕೊಡುವೆನಿದ್ದರೆ ಎಂದು ಅರಚುವವನೆ ಹೆಡ್ಡ ಸರ್ವಜ್ಞ ೧೬೨. ನಿತ್ಯ ನೀರೊಳು ಮುಳುಗಿ | ಹತ್ಯಾನೆ ಸ್ವರ್ಗಕ್ಕೆ ಹತ್ತೆಂಟು ಕಾಲ ಜಲದೊಳಗಿಹ ಕಪ್ಪೆ ಹತ್ತವ್ಯಾಕಯ್ಯ ಸರ್ವಜ್ಞ ೧೬೩. ಅನ್ನ ದೇವರ ಮುಂದೆ | ಇನ್ನು ದೇವರು ಉಂಟೆ ಅನ್ನವಿರುವನಕ ಪ್ರಾಣವು - ಜಗದೊಳ ಗನ್ನವೇ ದೈವ ಸರ್ವಜ್ಞ ೧೬೪. ನಂಬು ಪರಶಿವನೆಂದು | ನಂಬು ಗುರುಚರಣವನು ನಂಬಲಗಸ್ತ್ಯ ಕುಡಿದನು - ಶರಧಿಯನು ನಂಬು ಗುರುಪದವ ಸರ್ವಜ್ಞ ೧೬೫. ಬಂಧುಗಳಾದವರು ಮಿಂದುಂಡು ಹೋಹರು ಬಂಧನವ ಕಳೆಯಲರಿಯರು - ಗುರುವಿಂದ ಬಂಧನವಳಿಗು ಸರ್ವಜ್ಞ ೧೬೬. ಮೆಟ್ಟಿಪ್ಪುದಾಶೆಯನು | ಕಟ್ಟಿಪ್ಪುದಿಂದ್ರಿಯವ ತೊಟ್ಟಿಪ್ಪುದುಳ್ಳ ಸಮತೆಯನು - ಶಿವಪದವ ಮುಟ್ಟಿಪ್ಪುದಯ್ಯ ಸರ್ವಜ್ಞ ೧೬೭. ಚಿತ್ತೆಯ ಮಳೆ ಹೊಯ್ದು | ಮುತ್ತಾಗಬಲ್ಲುದೆ ಚಿತ್ತದ ನೆಲೆಯನರಿಯದೆ - ಬೋಳಾದ ರೆತ್ತಣ ಯೋಗ ಸರ್ವಜ್ಞ ೧೬೮. ಇಂದ್ರಿಯವ ತೊರೆದಾತ | ವಂದ್ಯನು ಜಗಕೆಲ್ಲ ಬಿಂದುವಿನ ಬೇಧವರಿದ ಮಹಾತ್ಮನು ಬೆಂದ ನುಲಿಯಂತೆ ಸರ್ವಜ್ಞ ೧೬೯. ಜ್ಞಾನಿ ಸಂಸಾರದೊಳು | ತಾನಿರಬಲ್ಲನು ಭಾನು ಮಂಡಲದಿ ಹೊಳೆವಂತೆ - ನಿರ್ಲೇಪ ಏನಾದಡೇನು ಸರ್ವಜ್ಞ ೧೭೦. ಸತ್ಯವ ನುಡಿವಾತ | ಸತ್ತವನೆನಬೇಡ ಹೆತ್ತ ತಾಯ್ ಮಗನ ಕರೆವಂತೆ - ಸ್ವರ್ಗದವ ರಿತ್ತ ಬಾಯೆಂಬ ಸರ್ವಜ