Skip to main content

Posts

Showing posts from November 16, 2010

ಅಲ್ಲಮಪ್ರಭುವಿನ ವಚನಗಳು : 81 ರಿಂದ 90

ಅಲ್ಲಮಪ್ರಭುವಿನ ವಚನಗಳು : 81 ರಿಂದ 90 ೮೧. ಮಜ್ಜನಕ್ಕೆಱೆವರೆಲ್ಲಾ ಇದ್ದಲ್ಲಿ ಫಲವೇನು ? ಮುದ್ರೆಧಾರಿಗಳಪ್ಪರಯ್ಯ ! ಲಿಂಗದಲ್ಲಿ ನಿಷ್ಠೆಯಿಲ್ಲ ಜಂಗಮದಲ್ಲಿ ಪ್ರೇಮಿಗಳಲ್ಲ ವೇಷಲಾಂಛನಧಾರಿಗಳಪ್ಪರಯ್ಯ ! ನೋಡಿ ಮಾಡುವ ಭಕ್ತಿ ಸಜ್ಜನಸಾರಾಯವಲ್ಲ ಗುಹೇಶ್ವರ ಮೆಚ್ಚನಯ್ಯ ! ೮೨. ಕೊಟ್ಟ ಕುದುರೆಯನೇಱಲಱಿಯದೆ ಮತ್ತೊಂದು ಕುದುರೆಯ ಬಯಸುವರು ವೀರರೂ ಅಲ್ಲ ! ಧೀರರೂ ಅಲ್ಲ !! ಇದು ಕಾರಣ ನೆಱೆ ಮೂಱು ಲೋಕವೆಲ್ಲವೂ ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ ಗುಹೇಶ್ವರನೆಂಬ ಲಿಂಗವನವರೆತ್ತಬಲ್ಲರೋ ? ೮೩. ಜೀವವಿಲ್ಲದ ಹೆಣನ ಹಿಡಿದಾರುವರಯ್ಯ ಪ್ರತಿಯಿಲ್ಲದ ಪ್ರತಿಗೆ ಪ್ರತಿಯ ಮಾಡುವರಯ್ಯ ಶಿರವಿಲ್ಲದ ಮುಂಡಕ್ಕೆ ಸೇಸೆಯನಿಕ್ಕುವರು ಗುಹೇಶ್ವರ ! ೮೪. ಆದ್ಯರಲ್ಲ ! ವೇದ್ಯರಲ್ಲ ! ಸಾಧ್ಯರಲ್ಲದ ಹಿರಿಯರ ನೋಡಾ ! ತನುವಿಕಾರ ! ಮನವಿಕಾರ ! ಇಂದ್ರಿಯವಿಕಾರದ ಹಿರಿಯರ ನೋಡಾ ! ಶಿವಚಿಂತೆ ಶಿವಜ್ಞಾನಿಗಳ ಕಂಡರೆ ಅಳವಾಡಿ ನುಡಿವರು ಗುಹೇಶ್ವರನಱಿಯದ ಕರ್ಮಿಗಳಯ್ಯ ! ೮೫. ಆಳವಱಿಯದ ಭಾಷೆ ಬಹುಕುಳವಾದ ನುಡಿ ಇಂತೆರಡಱ ನುಡಿ ಹುಸಿಯಯ್ಯ ! ಬಹುಭಾಷಿತರು, ಸುಭಾಷಿತವರ್ಜಿತರು "ಶರಣಸತಿ ಲಿಂಗಪತಿ" ಎಂಬರು ಹುಸಿಯಯ್ಯ ! ಇಂತಪ್ಪವರ ಕಂಡು ನಾಚಿದೆನಯ್ಯ ಗುಹೇಶ್ವರ. ೮೬. ದೇಶ ಗುಱಿಯಾಗಿ ಲಯವಾಗಿ ಹೋದವರ ಕಂಡೆ ! ತಮಂಧ ಗುಱಿಯಾಗಿ ಲಯವಾಗಿ ಹೋದವರ ಕಂಡೆ ! ಕಾಮ ಗುಱಿಯಾಗಿ ಬೆಂದುಹೋದವರ ಕಂಡೆ ! ನೀ