Skip to main content

Posts

Showing posts from November 27, 2010

ಸರ್ವಜ್ಞನ ವಚನಗಳು - 71 ರಿಂದ 80

ಸರ್ವಜ್ಞನ ವಚನಗಳು -  71 ರಿಂದ 80 ೭೧. ಲಿಂಗಕ್ಕೆ ತೋರಿಸುತ ನುಂಗುವಾತನೇ ಕೇಳು ಲಿಂಗವುಂಬುವದೆ ? ಇದನರಿದು ಕಪಿಯೆ ನೀ ಜಂಗಮಕೆ ನೀಡು ಸರ್ವಜ್ಞ ೭೨. ಲಿಂಗಪ್ರಸಾದವನು ಅಂಗಕ್ಕೆ ಕೊಂಬುವರು ಗಂಗಾಳದೊಳಗೆ ಕೈ ತೊಳೆದು ಚಲ್ಲುವಾ ಮಂಗಗಳ ನೋಡು ಸರ್ವಜ್ಞ ೭೩. ಹಲವನೋದಿದಡೇನು? ಚೆಲುವನಾದದಡೇನು ? ಕುಲವೀರನೆನೆಸಿ ಫಲವೇನು? ಲಿಂಗದಾ ಒಲುಮೆ ಇಲ್ಲದಲೆ ಸರ್ವಜ್ಞ ೭೪. ಓದುವಾದಗಳೇಕೆ ? ಗಾದೆಯ ಮಾತೇಕೆ? ವೇದ ಪುರಾಣವು ನಿನಗೇಕೆ ಲಿಂಗದಾ ಹಾದಿಯರಿಯದಲೆ ಸರ್ವಜ್ಞ ೭೫. ಕಂಡವರ ಕಂಡು ತಾ ಕೊಂಡ ಲಿಂಗವ ಕಟ್ಟಿ ಕೊಂಡಾಡಲರಿಯದಧಮಂಗೆ ಲಿಂಗವದು ಕೆಂಡದಂತಿಹುದು ಸರ್ವಜ್ಞ ೭೬. ಕಟ್ಟಲೂ ಬಿಡಲು ಶಿವ ಬಟ್ಟಲವ ಕದ್ದನೇ ಕಟ್ಟಲೂ ಬೇಡ ಬಿಡಲೂ ಬೇಡ ಕಣ್ಣು ಮನ ನಟ್ಟರೆ ಸಾಕು ಸರ್ವಜ್ಞ ೭೭. ಆ ದೇವ ಈ ದೇವ ಮಹಾದೇವನೆನಬೇಡ ಆ ದೇವರ ದೇವ ಭುವನದಾ ಪ್ರಾಣಿಗಳಿ ಗಾದವನೇ ದೇವ ಸರ್ವಜ್ಞ ೭೮. ಚಿತ್ರವನು ನವಿಲೊಳು ವಿ ಚಿತ್ರವನು ಗಗನದೊಳು ಪತ್ರ ಪುಷ್ಪಗಳ ವಿವಿಧವರ್ಣಗಳಿಂದ ಚಿತ್ರಿಸಿದರಾರು ಸರ್ವಜ್ಞ ೭೯. ಇಂಗಿನನೊಳು ನಾತವನು ತೆಂಗಿನೊಳಗೆಳೆ ನೀರು ಭ್ರಂಗ ಕೋಗಿಲೆಯ ಕಂಠದೊಳು ಗಾಯನವ ತುಂಬಿದವರಾರು ಸರ್ವಜ್ಞ ೮೦. ಕಳ್ಳಿಯೊಳು ಹಾಲು, ಮುಳು ಗಳ್ಳಿಯೊಳು ಹೆಜ್ಜೇನು ಎಳ್ಳಿನೊಳಗೆಣ್ಣೆ ಹನಿದಿರಲು, ಶಿವಲೀಲೆ ಸುಳ್ಳೆನ್ನಬಹುದೆ? ಸರ್ವಜ್ಞ