Skip to main content

Posts

Showing posts from November 18, 2010

ಅಲ್ಲಮಪ್ರಭುವಿನ ವಚನಗಳು : 101 ರಿಂದ 110

೧೦೧. ಪ್ರಣವಮಂತ್ರವ ಕರ್ಣದಲಿ ಹೇಳಿ ಶ್ರೀಗುರು ಶಿಷ್ಯನ ಅಂಗದ ಮೇಲೆ ಲಿಂಗಪ್ರತಿಷ್ಠೆಯ ಮಾಡಿದ ಬಳಿಕ ಪ್ರಾಣದಲಿ ಲಿಂಗವಿಪ್ಪುದೆಂಬ ವ್ರತಗೇಡಿಗಳ ಮಾತ ಕೇಳಲಾಗದು. ಒಳಗಿಪ್ಪನೇ ಲಿಂಗದೇವನು ಮಲ-ಮೂತ್ರ-ಮಾಂಸದ ಹೇಸಿಕೆಯೊಳಗೆ ? ಅಲ್ಲಿ ಪ್ರಾಣವಿಪ್ಪುದಲ್ಲದೆ ಲಿಂಗವಿಪ್ಪುದೇ ? ಆ ಪ್ರಾಣವ ತಂದು ತನ್ನ ಇಷ್ಟಲಿಂಗದಲ್ಲಿರಿಸಿ ನೆರೆಯ ಬಲ್ಲಡೆ ಆತನೆ ಪ್ರಾಣಲಿಂಗಸಂಬಂಧಿ ! ಅಲ್ಲದವರ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು ? ೧೦೨. ಕದಳಿಯ ಬನವ ಹೊಕ್ಕು ಹೊಲಬ ತಿಳಿಯದನ್ನಕ್ಕ, ಬಯಲ ಗಾಳಿಯ ಹಿಡಿದು ಘಟ್ಟಿ ಮಾಡದನ್ನಕ್ಕ, ಬಱಿದೆ ಬಹುದೇ ಶಿವಜ್ಞಾನ ? ಷಡುವರ್ಗವಳಿಯದನ್ನಕ್ಕ ಅಷ್ಟಮದವಳಿಯದನ್ನಕ್ಕ ಬಱಿದೆ ಬಹುದೇ ಶಿವಸಂಪದ ? ಮದಮತ್ಸರವ ಮಾಡಲಿಲ್ಲ ! ಹೊದಕುಳಿಗೊಳಲಿಲ್ಲ ಗುಹೇಶ್ವರಲಿಂಗ ಕಲ್ಪಿತದೊಳಗಲ್ಲ ! ೧೦೩. ಶಬ್ದ ಸ್ಪರ್ಶ ರೂಪ ರಸ ಗಂಧ ಪಂಚೇಂದ್ರಿಯ ಸಪ್ತಧಾತು ಅಷ್ಟಮದದಿಂದ ಮುಂದುಗಾಣದವರು ನೀವು ಕೇಳಿರೇ ! ಲಿಂಗವಾರ್ತೆಯ ವಚನರಚನೆಯ ಮಾತನಾಡುವಿರಯ್ಯ ! ಸಂಸಾರದ ಮುಚ್ಚು ಬಿಡದನ್ನಕ್ಕರ ಸೂಕ್ಷ್ಮಶಿವಪಥವು ಸಾಧ್ಯವಾಗದು. ಗುಹೇಶ್ವರಲಿಂಗದಲಿ ವಾಕು ಪಾಕವಾದಡೇನು ? ಮನ ಪಾಕವಾಗದನ್ನಕ್ಕರ ?! ೧೦೪. ಮರ್ತ್ಯಲೋಕದ ಮಾನವರು ದೇಗುಲದೊಳಗೊಂದು ದೇವರ ಮಾಡಿದಡೆ ಆನು ಬೆಱಗಾದೆನಯ್ಯ ! ನಿಚ್ಚಕ್ಕೆ ನಿಚ್ಚ ಅರ್ಚನೆಪೂಜನೆಯ ಮಾಡಿಸಿ ಭೋಗವ ಮಾಡುವರ ಕಂಡು ನಾನು ಬೆಱಗಾದೆನು ಗುಹೇಶ್ವರ, ನಿಮ್ಮ ಶರಣರು ಹಿಂದೆ ಲಿಂಗ