Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments. ೪೭೧. ಲಗ್ನವೆಲ್ಲಿಯದೋ ವಿಘ್ನವೆಲ್ಲಿಯದೋ ಸಂಗಯ್ಯ ? ದೋಷವೆಲ್ಲಿಯದೋ ದುರಿತವೆಲ್ಲಿಯದೋ ಸಂಗಯ್ಯ ? ನಿಮ್ಮ ಮಾಣದೆ ನೆನೆವಂಗೆ ಭವಕರ್ಮವೆಲ್ಲಿಯದೋ ಕೂಡಲಸಂಗಯ್ಯ! ೪೭೨. ಶರಣ ನಿದ್ರೆಗೈದರೆ ಜಪ ಕಾಣಿರೋ! ಶರಣನೆದ್ದು ಕುಳಿತರೆ ಶಿವರಾತ್ರಿ ಕಾಣಿರೋ! ಶರಣ ನಡೆದುದೇ ಪಾವನ ಕಾಣಿರೋ! ಶರಣ ನುಡಿದುದೇ ಶಿವತತ್ವಕಾಣಿರೋ ಕೂಡಲಸಂಗನ ಶರಣನ ಕಾಯವೇ ಕೈಲಾಸ ಕಾಣಿರೋ! ೪೭೩. ಸಮುದ್ರ ಘನವೆಂಬೆನೆ ? ಧರೆಯ ಮೇಲಡಗಿತ್ತು! ಧರೆ ಘನವೆಂಬೆನೆ ? ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು! ನಾಗೇಂದ್ರ ಘನವೆಂಬೆನೆ ? ಪಾರ್ವತಿಯ ಕಿರುಗುಣಿಕೆಯ ಮುದ್ರಿಕೆಯಾಯಿತ್ತು! ಅಂಥ ಪಾರ್ವತಿ ಘನವೆಂಬೆನೆ ? ಪರಮೇಶ್ವರನ ಅರ್ಧಾಂಗಿಯಾದಳು! ಅಂಥ ಪರಮೇಶ್ವರ ಘನವೆಂಬೆನೆ ? ನಮ್ಮ ಕೂಡಲಸಂಗನ ಶರಣರ ಮನದ ಕೊನೆಯ ಮೊನೆಯ ಮೇಲಡಗಿದನು! ೪೭೪. ನೆಲನೊಂದೇ ಹೊಲೆಗೇರಿ, ಶಿವಾಲಯಕ್ಕೆ! ಜಲವೊಂದೇ ಶೌಚಾಚಮನಕ್ಕೆ! ಕುಲವೊಂದೇ ತನ್ನ ತಾನರಿದವಂಗೆ! ಫಲವೊಂದೇ ಷಡುದರ್ಶನ ಮುಕ್ತಿಗೆ! ನಿಲವೊಂದೇ, ಕೂಡಲಸಂಗಮದೇವ, ನಿಮ್ಮನರಿದವಂಗೆ. ೪೭೫. ಅಯ್ಯಾ, ಸಜ್ಜನ ಸದ್ಭಕ್ತರ ಸಂಗದಿಂದ ಮಹಾನುಭಾವರ ಕಾಣಬಹುದು! ಮ...
ಬಸವಣ್ಣ,ಅಕ್ಕಮಹಾದೇವಿ,ಅಲ್ಲಮಪ್ರಭು ಮತೂ ಸರ್ವಜ್ಞರ ವಚನಗಳು