Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments. ೩೬೧. ಕೋಣನ ಹೇರಿಗೆ ಕುನ್ನಿ ಬಸುಗುತ್ತಬಡುವಂತೆ ತಾವು ನಂಬರು, ನಂಬುವರನು ನಂಬಲೀಯರು! ತಾವು ಮಾಡರು, ಮಾಡುವರನು ಮಾಡಲೀಯರು! ಮಾಡುವ ಭಕ್ತರ ಕಂಡು ಸೈರಿಸಲಾರದವರ ಕೂಗಿಡೆ ಕೂಗಿಡೆ ನರಕದಲ್ಲಿಕ್ಕುವ ಕೂಡಲಸಂಗಮದೇವ. ೩೬೨. ಚೇಳಿಂಗೆ ಬಸುರಾಯಿತ್ತೆ ಕಡೆ! ಬಾಳೆಗೆ ಫಲವಾಯಿತ್ತೆ ಕಡೆ ನೋಡಾ ! ರಣರಂಗದಲ್ಲಿ ಕಾದುವ ಓಲೆಯಕಾರಂಗೆ ಓಸರಿಸಿತ್ತೆ ಕಡೆ! ಮಾಡುವ ಭಕ್ತಂಗೆ ಮನಹೀನವಾದರೆ ಅದೇ ಕಡೆ ಕೂಡಲಸಂಗಮದೇವ. ೩೬೩. ಹುಲಿಯ ಹಾಲು ಹುಲಿಗಲ್ಲದೆ ಹೊಲದ ಹುಲ್ಲೆಗುಣಬಾರದು ಕಲಿಯ ಕಾಲ ತೊಡರು ಛಲದಾಳಿಂಗಲ್ಲದೆ ಇಕ್ಕಬಾರದು. ಅಳಿಮನದಾಸೆಯವರ ಮೂಗ ಹಲುದೋರ ಕೊಯ್ವ ಕೂಡಲಸಂಗಮದೇವ. ೩೬೪. ಅಲಗಲಗು ಮೋಹಿದಲ್ಲದೆ ಕಲಿತನವ ಕಾಣಬಾರದು. ನುಡಿವ ನುಡಿ ಜಾರಿದರೆ ಮನಕ್ಕೆ ಮನ ನಾಚಬೇಕು. ಶಬ್ದಗಟ್ಟಿಯತನದಲ್ಲಿ ಎಂತಪ್ಪುದಯ್ಯ ಭಕ್ತಿ ? ಪಾಪಿಯ ಕೂಸನೆತ್ತಿದಂತೆ- ಕೂಡಲಸಂಗಮದೇವರ ಭಕ್ತಿ ಅಳಿಮನದವರಿಗೆ ಅಳವಡದಯ್ಯ! ೩೬೫. ಹರಬೀಜವಾದರೆ ಹಂದೆ ತಾನಪ್ಪನೇ ? ಒರೆಯ ಬಿಚ್ಚಿ ಇರಿಯದವರ ಲೋಕ ಮೆಚ್ಚುವುದೆ ? ಚಲ್ಲಣವುಟ್ಟು ಕೈಯ ಪಟ್ಟೆಹವಿಡಿದು ಗರುಡಿಯ ಕಟ್ಟಿ ಶ್ರಮವ ಮಾಡುವ- ಅಂತೆ...
ಬಸವಣ್ಣ,ಅಕ್ಕಮಹಾದೇವಿ,ಅಲ್ಲಮಪ್ರಭು ಮತೂ ಸರ್ವಜ್ಞರ ವಚನಗಳು