೧೦೧. ಕಂಗಳೊಳಗೆ ತೊಳಗಿ ಬೆಳಗುವ ದಿವ್ಯರೂಪನ ಕಂಡು ಮೈಮರೆದೆನವ್ವ ಮಣಿಮುಕುಟದ ಫಣಿ-ಕಂಕಣದ ನಗೆಮೊಗದ ಸುಲಿಪಲ್ಲ ಸೊಬಗನ ಕಂಡು ಮನಸೋತೆನವ್ವ ಇಂತಾಗಿ ಚೆನ್ನಮಲ್ಲಿಕಾರ್ಜುನನೆನ್ನ ಮದುವಣಿಗ ಆನು ಮದುವಣಿಗಿ ಕೇಳಾ ತಾಯೆ ೧೦೨. ಮನಮನ ತಾರ್ಕಣೆಯ ಕಂಡು ಅನುಭವಿಸಲು ನೆನಹೇ ಘನವಹುದಲ್ಲದೆ ಅದು ಹವಣದಲ್ಲಿ ನಿಲ್ಲುವುದೇ? ಎಲೆ ಅವ್ವ, ನೀನು ಮರುಳವ್ವೆ! ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಗೊಲಿದು ಸಲೆ ಮಾರುವೋದೇನು ನಿನ್ನ ತಾಯಿತನವನೊಲ್ಲೆ ಹೋಗೇ! ೧೦೩. ಲಿಂಗವನೂ ಪುರಾತನರನೂ ಅನ್ಯರ ಮನೆಯೊಳಯಿಂಕೆ ಹೋಗಿ ಹೊಗಳುವರು ತಮ್ಮದೊಂದು ಉದರ ಕಾರಣ ಲಿಂಗವೂ ಪುರಾತನರೂ ಅಲ್ಲಿಗೆ ಬರಬಲ್ಲರೆ? ಅನ್ಯವನೆ ಮರೆದು, ನಿಮ್ಮ ನೆನೆವರ ಎನಗೊಮ್ಮೆ ತೋರಾ ಚೆನ್ನಮಲ್ಲಿಕಾರ್ಜುನಯ್ಯ! ೧೦೪. ಗುಣ-ದೋಷ ಸಂಪಾದನೆಯ ಮಾಡುವನ್ನಕ್ಕ ಕಾಮದ ಒಡಲು ಕ್ರೋಧದ ಗೊತ್ತು ಲೋಭದ ಇಕ್ಕೆ ಮೋಹದ ಮಣ್ದಿರ ಮದದಾವರಣ ಮತ್ಸರದ ಹೊದಿಕೆ ಆ ಭಾವವರತಲ್ಲದೆ ಚೆನ್ನಮಲ್ಲಿಕಾರ್ಜುನನ ಅರಿವುದಕ್ಕೆ ಇಂಬಿಲ್ಲ ಕಾಣಿರಣ್ಣ ೧೦೫. ಕಡೆಗೆ ಮಾಡದ ಭಕ್ತಿ ಧೃಡವಿಲ್ಲದಾಳುತನ ಮೃಡನೊಲಿಯ ಹೇಳಿದರೆ ಎಂತೊಲಿವನಯ್ಯ? ಮಾಡಲಾಗದಳಿಮನವ ಮಾಡಿದರೆ ಮನದೊಡೆಯ ಬಲ್ಲನೈಸೆ ವಿರಳವಿಲ್ಲದ ಮಣಿಯ ಪವಣಿಸಿಹೆನೆಂದೆಡೆ ದುರುಳ ಚೆನ್ನಮಲ್ಲಿಕಾರ್ಜುನಯ್ಯನೆಂತೊಲಿವನಯ್ಯ ೧೦೬. ಬೆಟ್ಟದ ಮೇಲೊಂದು ಮನೆಯ ಮ...
ಬಸವಣ್ಣ,ಅಕ್ಕಮಹಾದೇವಿ,ಅಲ್ಲಮಪ್ರಭು ಮತೂ ಸರ್ವಜ್ಞರ ವಚನಗಳು