Skip to main content

Posts

Showing posts from December 8, 2010

ಸರ್ವಜ್ಞನ ವಚನಗಳು - 181 ರಿಂದ 190

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೧೮೧. ಕೊಟ್ಟು ಹುಟ್ಟಲಿಲ್ಲ | ಮುಟ್ಟಿ ಪೂಜಿಸಲಿಲ್ಲ ಸಿಟ್ಟಿನಲಿ ಶಿವನ ಬೈದರೆ - ಶಿವ ತಾನು ರೊಟ್ಟಿ ಕೊಡುವನೆ ಸರ್ವಜ್ಞ ೧೮೨. ಹಸಿವರಿತು ಉಂಬುದು | ಬಿಸಿನೀರ ಕುಡಿವುದು ಹಸಿವಕ್ಕು ವಿಷಯ ಘನವಕ್ಕು - ವೈದ್ಯಗೆ ಬೆಸಸ ಬೇಡೆಂದ ಸರ್ವಜ್ಞ ೧೮೩. ಲಿಂಗಕೆ ತೋರಿಸುತ | ನುಂಗುವಾತನೆ ಕೇಳು ಲಿಂಗ ಉಂಬುವುದೆ ? ಪೊಡಮಡು - ತೆಲೊ ಪಾಪಿ ಜಂಗಮಕೆ ನೀಡು ಸರ್ವಜ್ಞ ೧೮೪. ಹೆಂಡಿರು ಮಕ್ಕಳಿಗೆಂದು | ದಂಡಿಸದಿರು ದೇಹವನು ಭಂಡ ವಸ್ತುವನು ಕೊಡದುಣದೆ - ಬೈಚಿಡಲು ಕಂಡವರಿಗಹುದು ಸರ್ವಜ್ಞ ೧೮೫. ಮಾತು ಬಂದಲ್ಲಿ ತಾ | ಸೋತು ಬರುವುದು ಲೇಸು ಮಾತಿಂಗೆ ಮಾತು ಮಥಿಸೆ - ವಿಧಿ ಬಂದು ಆತುಕೊಂಡಿಹುದು ಸರ್ವಜ್ಞ ೧೮೬. ಕಣ್ಣು ನಾಲಗೆ ಮನವು | ತನ್ನವೆಂದೆನ ಬೇಡ ಅನ್ಯರು ಕೊಂದರೆನ ಬೇಡ - ಇವು ಮೂರು ತನ್ನನೇ ಕೊಲುಗು ಸರ್ವಜ್ಞ ೧೮೭. ನುಡಿಸುವುದಸತ್ಯವನು | ಕೆಡಿಸುವುದು ಧರ್ಮವನು ಒಡಲನೆ ಕಟ್ಟಿ ಹಿಡಿಸುವುದು - ಲೋಭದ ಗಡಣ ಕಾಣಯ್ಯ ಸರ್ವಜ್ಞ ೧೮೮. ಸೊಡರಿಂಗೆ ಎಣ್ಣೆಯ | ಕೊಡನೆತ್ತಿ ಹೊಯಿ